ಈ ವಾರ ಮೂರು ಐಪಿಒ

7

ಈ ವಾರ ಮೂರು ಐಪಿಒ

Published:
Updated:

ನವದೆಹಲಿ (ಪಿಟಿಐ): ತಮ್ಮ ಉಳಿತಾಯದ ಹಣವನ್ನು  ಪ್ರಾಥಮಿಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿರುವ ಹೂಡಿಕೆದಾರರಿಗೆ ಈ ವಾರ ಮೂರು ಆರಂಭಿಕ ಸಾರ್ವಜನಿಕ ಕೊಡುಗೆಗಳು  (ಐಪಿಒ) ಹೂಡಿಕೆ ಅವಕಾಶ ಒದಗಿಸಲಿವೆ.ಬೆಂಗಳೂರು ಮೂಲದ ಐ.ಟಿ ಮತ್ತು ಹೊರಗುತ್ತಿಗೆ ಸಂಸ್ಥೆ ಅಕ್ರೊಪೆಟಲ್ ಟೆಕ್ನಾಲಜೀಸ್‌ನ ರೂ. 170 ಕೋಟಿ,  ಸಿದ್ಧ ಉಡುಪು ತಯಾರಿಕಾ ಸಂಸ್ಥೆ ಸುದರ್ ಗಾರ್ಮೆಂಟ್ಸ್ ಸಂಸ್ಥೆಯ ರೂ. 70 ಕೋಟಿಯ ‘ಐಪಿಒ’ ಸೋಮವಾರ  ಮತ್ತು ಫಿನಿಯೊಟೆಕ್ಸ್ ಕೆಮಿಕಲ್ಸ್‌ನ ರೂ 30 ಕೋಟಿಗಳ ‘ಐಪಿಒ’ ಬುಧವಾರ ಬಿಡುಗಡೆ ಆಗಲಿದೆ.

 

ಮಾರುಕಟ್ಟೆ ಪರಿಣತರ ಪ್ರಕಾರ,  ಇವು ಸಣ್ಣ ಪ್ರಮಾಣದ ‘ಐಪಿಒ’ಗಳಾಗಿವೆ. ಹೂಡಿಕೆ ಮಾಡಬಹುದಾದ ಮೊತ್ತವೂ ಕಡಿಮೆ ಇದೆ. ಷೇರುಪೇಟೆಯಲ್ಲಿನ ಏರಿಳಿತದ ಹಿನ್ನೆಲೆಯಲ್ಲಿ ಸಾಮಾನ್ಯ ಹೂಡಿಕೆದಾರರ ಪಾಲ್ಗೊಳ್ಳುವಿಕೆಯು ಹೇಗಿರುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ ಎಂದು ಎಸ್‌ಎಂಸಿ ಗ್ಲೋಬಲ್ ಈಕ್ವಿಟಿಯ ಮುಖ್ಯಸ್ಥ ಜಗನ್ನಾಧಮ ಥುನುಗುಂಟ್ಲಾ  ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry