ಈ ಶಾಲೆಗಳಿಗೆ ಪರಿಹಾರವಿಲ್ಲವೇ?

7

ಈ ಶಾಲೆಗಳಿಗೆ ಪರಿಹಾರವಿಲ್ಲವೇ?

Published:
Updated:

ಶಿಕ್ಷಣ ಇಲಾಖೆಯು ಮೂರು ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ತರಾತುರಿಯಲ್ಲಿ ಇರುವಂತಿದೆ. ಈ ಶಾಲೆಗಳಲ್ಲಿ ಹಾಜರಾತಿ ಸಂಖ್ಯೆ 10 ಕ್ಕಿಂತ ಕಡಿಮೆಯಂತೆ. ಹಿಂದೆ ಮಕ್ಕಳ ಸಂಖ್ಯೆ ಸಾಕಷ್ಟಿದ್ದದ್ದರಿಂದಲೇ ಈ ಎಲ್ಲ ಶಾಲೆಗಳನ್ನು ತೆರೆದದ್ದು ಎಂದಾಗ, ಶಾಲೆಗೆ ಹೋಗುವ ವಯಸ್ಸಿನ ಮಕ್ಕಳ ಸಂಖ್ಯೆ ಕಡಿಮೆಯಾಯಿತೆಂದರೆ ಅಚ್ಚರಿ.ಅಂತಹ ಪರಿಸ್ಥಿತಿ ಸೃಷ್ಟಿಯಾದುದಾದರೂ ಹೇಗೆ? ಕಳೆದ ಐದಾರು ವರ್ಷಗಳಿಂದ ಜನನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿರಬಹುದೇ? ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಲೆಂಬ ಹಂಬಲ ತಂದೆ-ತಾಯಿಯರದ್ದಾದ ಕಾರಣ ಸರ್ಕಾರಿ ಶಾಲೆಗಳತ್ತ ನೋಡುವವರಿಲ್ಲದ ಪರಿಸ್ಥಿತಿಯೂ ಇರಬಹುದೇ!ಹೌದಾದರೆ, ಸರ್ಕಾರಿ ಶಾಲೆಗಳಿಗೆ ಎರವಾಗುವ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದೇಕೆ? ಅಥವಾ ಈ ಸರ್ಕಾರಿ ಶಾಲೆಗಳು ಬಡತನದ ರೇಖೆಯನ್ನೂ ಮುಟ್ಟಲಾರದಂಥ ಸ್ಥಿತಿಯಲ್ಲಿರುವುವೇ? ಅಥವಾ, ಉಪಾಧ್ಯಾಯರಿಲ್ಲದೆ ಇವನ್ನು ಮುಚ್ಚಬೇಕಾಗಿ ಬಂದಿದೆಯೇ? ಅಥವಾ, ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಕಂಡು ತಂದೆ-ತಾಯಿ ಅನಿವಾರ‌್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪರಿಸ್ಥಿತಿ ಉದ್ಭವಿಸಿದೆಯೇ?ಒಟ್ಟಾರೆ ಶಿಕ್ಷಣ ಇಲಾಖೆಯ ಕ್ಷಮತೆಗೆ ಇದು ಸಾಕ್ಷಿಯಾಗಿದೆ. ಒಮ್ಮೆ ಮುಚ್ಚಿದ ಈ ಸರ್ಕಾರಿ ಶಾಲೆಗಳ ಭವಿಷ್ಯವೇನು ಕಟ್ಟಡ, ಜಾಗ ಇತ್ಯಾದಿಗಳು. ಏನಾದರೇನಂತೆ, 3000 ಶಾಲೆಗಳಿಗೆ ತಗಲುವ ವೆಚ್ಚ ಕಡಿಮೆಯಾಯಿತಲ್ಲ, ಅಷ್ಟರಮಟ್ಟಿಗೆ ಸರ್ಕರಕ್ಕೆ ಸಮಾಧಾನವೇ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry