ಶನಿವಾರ, ಮೇ 15, 2021
24 °C

ಈ ಸಮಸ್ಯೆಗೆ ಪರಿಹಾರ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸಂಖ್ಯೆ ಕಡಿಮೆ ಆಗಬೇಕು ಮರ-ಗಿಡಗಳನ್ನು ಬೆಳೆಸಬೇಕು ಎಂದು ಪರಿಸರವಾದಿಗಳು ಹೇಳುತ್ತಾರೆ. ನಮ್ಮ ಊರು ಬೆಟ್ಟ ಗುಡ್ಡ, ಮರಗಿಡಗಳಿಂದ ಸುತ್ತುವರಿದಿದೆ. ಜನಸಂಖ್ಯೆಯೂ ತುಂಬಾ ಕಡಿಮೆ. ಇದೇ ನಮಗೆ ಸಮಸ್ಯೆ ಆಗಿರುವುದು.ಜನಸಂಖ್ಯೆ ಜಾಸ್ತಿ ಇರುವಲ್ಲಿ ಸಂಪರ್ಕ ವ್ಯವಸ್ಥೆಗಳು ಇರುತ್ತವೆ. ಈ ಬೆಟ್ಟಗುಡ್ಡಗಳು, ಮರಗಳು ಎಲ್ಲ ಊರುಗಳಿಗಿಂತ ಜಾಸ್ತಿ ಇರುವುದರಿಂದ ನಮ್ಮ ಊರಿಗೆ ಕರೆಂಟ್ ಬಂದಿಲ್ಲ. (ಮರ ಕಡಿಯದೆ ಕರೆಂಟ್ ಬರುವುದು ಹೇಗೆ?) ದೂರವಾಣಿ ಸಂಪರ್ಕ ಸರಿ ಇಲ್ಲ.`ಸರಿಪಡಿಸಿ~ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳನ್ನು ಕೇಳಿದರೆ ಅವರು ಜನಸಂಖ್ಯೆ ಹೆಚ್ಚು ಇದ್ದರೆ ಸರಿ ಮಾಡಬಹುದಿತ್ತು. ನಿಮ್ಮ ಊರಿನಲ್ಲಿ  ಅತೀ ಕಡಿವೆು ಜನಸಂಖ್ಯೆ ಇರುವುದರಿಂದ ದೂರವಾಣಿ ಸರಿಪಡಿಸಲು ಸಾಧ್ಯವಿಲ್ಲ. ಅದಕ್ಕೆ ತುಂಬ ಖರ್ಚು ಬೀಳುತ್ತದೆ. ಅದನ್ನು ಹಿಂದಿರುಗಿಸಿ ಎಂದು ಹೇಳುತ್ತಾರೆ.

 

ಇತ್ತ ಮೊಬೈಲ್ ಸಂಪರ್ಕವೂ ಸರಿಯಾಗಿ ಸಿಗುತ್ತಿಲ್ಲ. ಜನಸಂಖ್ಯೆ ಕಡಿಮೆ ಇರುವ ಕಾರಣದಿಂದಲೇ ಬಸ್‌ನ ವ್ಯವಸ್ಥೆಯೂ ಇಲ್ಲ. ಬೆಳಗ್ಗಿನ ಪೇಪರ್ ಓದಬೇಕಾದರೆ ಸಾಯಂಕಾಲದವರೆಗೆ ಕಾಯಬೇಕು. ಇದೆಲ್ಲ ಇಲ್ಲದೆ ಈ ಆಧುನಿಕ ಯುಗದಲ್ಲಿ ಬಾಳುವುದು ಹೇಗೆ? ಪರಿಸ್ಥಿತಿ ಹೀಗಿರುವಾಗ ಪರಿಸರ ಮುಖ್ಯವೋ?

 

ಅಭಿವೃದ್ಧಿ ಮುಖ್ಯವೋ ಉತ್ತರಿಸುವವರು ಯಾರು? ಅಥವಾ ಪರಿಸರ ಉಳಿಸಿಕೊಂಡು ಸಂಪರ್ಕ ವ್ಯವಸ್ಥೆಯನ್ನು ಕೊಡಿಸಲು ಸರ್ಕಾರಕ್ಕೆ ಏಕೆ ಸಾಧ್ಯ ಆಗುವುದಿಲ್ಲ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.