ಮಂಗಳವಾರ, ಮೇ 11, 2021
24 °C

ಈ ಸೋಲಿಗೆ ಕಾರಣ ಹುಡುಕುತ್ತಾ...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

`ಕೌಶಿಕ್ ಅವರಂಥ ಕೋಚ್ ಇದ್ದಿದ್ದರೆ ಈ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ...~

`ಈ ದೇಶದ ಹಾಕಿ ಆಡಳಿತ ಮಾಡಿದ ಬಹುದೊಡ್ಡ ತಪ್ಪು ಎಂ.ಕೆ.ಕೌಶಿಕ್ ಅವರನ್ನು ಮಹಿಳಾ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಸಿದ್ದು~-ಈ ರೀತಿ ಹೇಳಿದ ಮಾಜಿ ಒಲಿಂಪಿಯನ್ ಎಂ.ಪಿ.ಗಣೇಶ್ ಅವರ ಮಾತಿನಲ್ಲಿ ಸದ್ಯದ ವ್ಯವಸ್ಥೆ ಬಗ್ಗೆ ಆಕ್ರೋಶವಿತ್ತು. ಒಳ್ಳೆಯ ವ್ಯವಸ್ಥೆಯನ್ನು ಹಾಳುಗೆಡವಿದ್ದರ ಬಗ್ಗೆ ಅಸಮಾಧಾನವಿತ್ತು. ಯಾರದ್ದೊ ಮಾತು ಕೇಳಿ ಮತ್ತೊಬ್ಬರನ್ನು ಬಲಿಪಶು ಮಾಡಿದ ರೀತಿಗೆ ಕೋಪವಿತ್ತು.`2002ರ ಮ್ಯಾಂಚೆಸ್ಟರ್ ಕಾಮನ್‌ವೆಲ್ತ್ ಕ್ರೀಡಾಕೂಟದ್ಲ್ಲಲಿ ಮಹಿಳಾ ತಂಡ ಬೆಳ್ಳಿ ಪದಕ ಗೆಲ್ಲಲು ಕಾರಣವಾಗಿದ್ದು ಕೌಶಿಕ್. ಪುರುಷರ ತಂಡದ ಕೋಚ್ ಆಗಿಯೂ ಅವರು ಯಶಸ್ಸು ಕಂಡಿದ್ದರು. ಆದರೆ ಇಂಥವರನ್ನು ಹಾಕಿ ಆಡಳಿತ ಉಳಿಸಿಕೊಳ್ಳಲಿಲ್ಲ. ಅಧಿಕಾರಿಗಳು ತಮ್ಮ ಅಸ್ತಿತ್ವಕ್ಕಾಗಿ ಅವರನ್ನು ಬಲಿಪಶು ಮಾಡಿದರು. ಈಗ ಸಮಸ್ಯೆ ಏನು ಎಂಬುದು ಕ್ರೀಡಾ ಪ್ರಿಯರಿಗೆ ಗೊತ್ತಾಗುತ್ತಿದೆ. ಸದ್ಯದ ಕೋಚಿಂಗ್ ವ್ಯವಸ್ಥೆಯೇ ಸರಿ ಇಲ್ಲ. ಹಾಗಾಗಿ ಉತ್ತಮ ಪ್ರದರ್ಶನದ ಮಾತು ಕನಸು~ ಎನ್ನುತ್ತಾರೆ ಗಣೇಶ್.ನ್ಯೂಜಿಲೆಂಡ್‌ನ ಪಾಕುರಂಗಾದಲ್ಲಿ ಕಳೆದ ವಾರ ನಡೆದ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಭಾರತದ ವನಿತೆಯರು ಅಮೆರಿಕಾದಂತಹ ರಾಷ್ಟ್ರದ ಕೈಯ್ಲ್ಲಲೂ ಸೋತ ಮೇಲೆ ಭವಿಷ್ಯದ ಹಾದಿಯೇ ಮಬ್ಬಾದಂತಿದೆ. ನವದೆಹಲಿಯಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ದುರ್ಬಲ ತಂಡಗಳ ಎದುರು ಕೂಡ ಭಾರತ ಪರದಾಡಿತ್ತು.`ಈಗಿನ ಕೋಚ್‌ಗಳಿಗೆ ಕೊಂಚವೂ ಅನುಭವ ಇಲ್ಲ. ತಾಂತ್ರಿಕ ಜ್ಞಾನವೂ ಇಲ್ಲ. ತಂಡದ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಬದಲಾಗಿ ಅಧಿಕಾರಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ ಅಷ್ಟೆ~ ಎಂಬುದು ಗಣೇಶ್ ಅಭಿಪ್ರಾಯ.

ಗಣೇಶ್ ಅವರ ಈ ಮಾತಿಗೆ ಧ್ವನಿಗೂಡಿಸಿದ್ದು ಭಾರತ ತಂಡದ ಮಾಜಿ ನಾಯಕಿ ಎಲ್ವಿರೊ ಬ್ರಿಟ್ಟೊ.  `ಹಾಕಿ ಆಡಳಿತ ನಡೆಸುತ್ತಿರುವವರು ಈ ಕ್ರೀಡೆಗೇ ಮುಳುವಾಗುತ್ತಿದ್ದಾರೆ. ತಮ್ಮ ಅಸ್ತಿತ್ವಕ್ಕಾಗಿ ಆಟಗಾರ್ತಿಯರ ಭವಿಷ್ಯವನ್ನೇ ಹಾಳು ಮಾಡುತ್ತಿದ್ದಾರೆ. ಎರಡು ವರ್ಷದ ಹಿಂದೆ ಉದ್ಭವಿಸಿದ ಲೈಂಗಿಕ ಹಗರಣ ನಿಮಗೆಲ್ಲಾ ಗೊತ್ತೇ ಇದೆ. ಅದೊಂದು ಪೂರ್ವಯೋಜಿತ ಕೃತ್ಯ.

 

ಅಂದಿನ ಯಶಸ್ವಿ ಕೋಚ್ ಕೌಶಿಕ್ ಅವರನ್ನು ಹೊರ ಹಾಕಲು ನಡೆಸಿದ ಷಡ್ಯಂತ್ರ. ಆಟಗಾರ್ತಿಯರು ಕೂಡ ಅಧಿಕಾರಿಗಳ ತಾಳಕ್ಕೆ ಹೆಜ್ಜೆ ಹಾಕಿ ಕೌಶಿಕ್ ಮೇಲೆ ಆರೋಪ ಹೊರಿಸಿದರು~ ಎಂದು ನೇರವಾಗಿ ಆಡಳಿತವನ್ನು ಟೀಕಿಸುತ್ತಾರೆ ಬ್ರಿಟ್ಟೊ.`ಲೈಂಗಿಕ ದೌರ್ಜನ್ಯಕ್ಕೆ ಒಳಗಾಗ್ದ್ದಿದೇನೆ~ ಎಂದು ಭಾರತ ಹಾಕಿ ತಂಡದ ಆಟಗಾರ್ತಿ ರಂಜಿತಾ ದೇವಿ ಹಾಕಿ ಇಂಡಿಯಾ ಹಾಗೂ ಕ್ರೀಡಾ ಸಚಿವಾಲಯಕ್ಕೆ ಈ ಹಿಂದೆ ಪತ್ರ ಬರೆದಿದ್ದರು. ಅಂದಿನ ಕೋಚ್ ಕೌಶಿಕ್ ವಿರುದ್ಧ ಆಪಾದನೆ ಮಾಡಿದ್ದರು. ತಮ್ಮ ಮೇಲೆ ಆರೋಪ ಮಾಡುತ್ತಿದ್ದಂತೆ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಆಟಗಾರ ಕೌಶಿಕ್ ರಾಜೀನಾಮೆ ನೀಡಿದ್ದರು.`ಭಾರತ ತಂಡ ಹಾಗೂ ಆಡಳಿತದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ನಾನು ಮಾತನಾಡಿದರೆ, ಅದನ್ನು ನೀವು ಬರೆದರೆ ಇಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹಾಗಾಗಿ ನಾನು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ~ ಎಂದಿದ್ದು ಧನರಾಜ್ ಪಿಳ್ಳೈ.`ಹಿರಿಯ ಆಟಗಾರ್ತಿಯರನ್ನು ಸುಖಾಸುಮ್ಮನೇ ಕಡೆಗಣಿಸಲಾಗುತ್ತಿದೆ. ಅದಕ್ಕೆ ಮಮತಾ ಖರಬ್, ಸಬಾ ಅಂಜುಮ್, ದೀಪಿಕಾ ಮೂರ್ತಿ ಅವರೇ ಸಾಕ್ಷಿ. ಜೂನಿಯರ್ ಆಟಗಾರ್ತಿ ರೀತು ರಾಣಿಯನ್ನು ನಾಯಕಿಯನ್ನಾಗಿ ಮಾಡಿದ್ದಾರೆ. ಅನುಭವಿ ಆಟಗಾರ್ತಿಯರನ್ನೇಕೆ ಈ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿ ಹಾಕಿ ಇಂಡಿಯಾ ಹಾಗೂ ಭಾರತ ಹಾಕಿ ಫೆಡರೇಷನ್ ನಡುವಿನ ಜಗಳ ಕೂಡ ಈ ಪರಿಸ್ಥಿತಿಗೆ ಕಾರಣ~ ಎಂದು ಮಾಜಿ ನಾಯಕಿ ಹೆಲೆನ್ ಮೇರಿ ಹೇಳುತ್ತಾರೆ.ಭರವಸೆಯ ಆಟಗಾರ್ತಿಯರೇ ಇಲ್ಲ:


`ಇವರು ಆಡುವುದಿಲ್ಲ ಎಂದು ನಾಳೆ ಹೇಳಿದರೆ ಈ ದೇಶದಲ್ಲಿ ಮತ್ತೊಬ್ಬ ಆಟಗಾರ್ತಿ ಸಿಗುವುದಿಲ್ಲ...~ ಎಂದು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಹೇಳಿದ ಒಂದು ವಾಕ್ಯ ಭಾರತದಲ್ಲಿ ಮಹಿಳಾ ಹಾಕಿ ಪರಿಸ್ಥಿತಿಯನ್ನು ಮತ್ತಷ್ಟು ಬೆತ್ತಲು ಮಾಡುತ್ತದೆ.`ಈಗಿನ ಭಾರತ ತಂಡವನ್ನೇ ಗಮನಿಸಿ. ಅದು ಜಾರ್ಖಂಡ್, ಒಡಿಶಾ, ಪಂಜಾಬ್ ಹಾಗೂ ಹರಿಯಾಣ ಆಟಗಾರ್ತಿಯರ ತಂಡವಾಗಿದೆ. ಕಳೆದ ಐದಾರು ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ತಂಡ ಸೋಲಲಿ, ಗೆಲ್ಲಲಿ ಅವರನ್ನೇ ಆಡಿಸಬೇಕು~ ಎನ್ನುವ ಕೃಷ್ಣಮೂರ್ತಿ ಮಾತಿನಲ್ಲಿ ಅರ್ಥವಿದೆ.`ನಾಳೆ ಪಂದ್ಯವಿದೆ ಎಂದರೆ ಇವತ್ತು ಈ ಆಟಗಾರ್ತಿಯರು ಒಂದು ಕಡೆ ಸೇರುತ್ತಾರೆ. ಈ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದರೆ ಅದು ಹೇಗೆ ಸಾಧ್ಯ?~ ಎನ್ನುತ್ತಾರೆ ಮಾಜಿ ಒಲಿಂಪಿಯನ್ ಹಾಗೂ ಭಾರತ ಪುರುಷರ ತಂಡದ ಆಯ್ಕೆ ಸಮಿತಿ ಸದಸ್ಯ ಎ.ಬಿ.ಸುಬ್ಬಯ್ಯ.ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಲು ಈ ಆಟಗಾರ್ತಿಯರಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಇವರ ದೈಹಿಕ ಸಾಮರ್ಥ್ಯ ಅಷ್ಟಕಷ್ಟೆ. ಮೊದಲು ಫಿಟ್‌ನೆಸ್ ಮಟ್ಟದಲ್ಲಿ ಗಣನೀಯ ಸುಧಾರಣೆ ಆಗಬೇಕಾಗಿದೆ. ಜೊತೆಗೆ ಯುರೋಪಿಯನ್ ಶೈಲಿಯ ಆಟಕ್ಕೆ ಭಾರತ ಹೊಂದಿಕೊಳ್ಳಬೇಕಾಗಿದೆ.  ಅದಷ್ಟೇ ಅಲ್ಲ; ಮಹಿಳೆಯರ ಹಾಕಿಯನ್ನು ಕಡೆಗಣಿಸಲಾಗುತ್ತಿದೆ ಎಂಬುದು ಕೃಷ್ಣಮೂರ್ತಿ ಅವರ ವಾದ.

 

ಅದಕ್ಕೊಂದು ಉದಾಹರಣೆ ಭಾರತ ತಂಡದ ಮಾಜಿ ನಾಯಕಿ ಅಸುಂತಾ ಲಾಕ್ರಾ ಇತ್ತೀಚೆಗೆ ನೀಡಿದ ಹೇಳಿಕೆ. ಅಭ್ಯಾಸ ನಡೆಸಲು ಸರಿಯಾದ ಶೂ ಇಲ್ಲದ ಕಾರಣ ಅವರು ಸಹೋದರನ ಹಳೆಯ ಶೂ ಧರಿಸಿ ಆಡ್ದ್ದಿದ್ದರು.

 

ತಂಡವನ್ನು ಮುನ್ನಡೆಸಿದ್ದ ಆಟಗಾರ್ತಿಗೆ ಈ ಸಮಸ್ಯೆ ಎದುರಾದರೆ ಇನ್ನುಳಿದ ಆಟಗಾರ್ತಿಯರ ಪಾಡೇನು? ಪ್ರೇಕ್ಷಕರು ತಮ್ಮ ಮಕ್ಕಳನ್ನು ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಕಳುಹಿಸುತ್ತಾರಾ?  `ನಮ್ಮಂತಹ ಪರಿಸ್ಥಿತಿ ಯಾವುದೇ ಯುವ ಆಟಗಾರ್ತಿಯರಿಗೂ ಬರಬಾರದು. ಉದಯೋನ್ಮುಖ ಆಟಗಾರ್ತಿಯರಿಗೆ ಆರಂಭದಲ್ಲೇ ಸರಿಯಾದ ಸೌಲಭ್ಯ ನೀಡಬೇಕು. ಇಲ್ಲದಿದ್ದರೆ ಹಾಕಿ ಕ್ರೀಡೆಯತ್ತ ಯಾರೂ ತಲೆ ಹಾಕುವುದಿಲ್ಲ~ ಎಂದು ಅಸುಂತಾ ಅಸಮಾಧಾನ ವ್ಯಕ್ತಪಡಿಸಿದ್ದರು.

 

ಅಸುಂತಾ ಅವರ ಅಣ್ಣಂದಿರಾದ ಬಿಮಲ್ ಹಾಗೂ ಬೀರೇಂದ್ರ ಲಾಕ್ರಾ ಕೂಡ ಭಾರತ ತಂಡ ಪ್ರತಿನಿಧಿಸಿದ್ದಾರೆ. ಪ್ರತಿಭಾವಂತ ಆಟಗಾರ್ತಿಯರಾದ ರಾಣಿ ರಾಂಪಾಲ್, ಸಂದೀಪ್ ಕೌರ್, ರೋಸ್ಲಿನ್ ಡಂಗ್ ಡಂಗ್, ಅನುರಾಧಾ ದೇವಿ ಅವರ ಪಾಡು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಪುರುಷರ ಹಾಕಿ ಬಗ್ಗೆ ಗಣೇಶ್ ಏನು ಹೇಳುತ್ತಾರೆ...?
ಹಾಕಿ ಆಡಳಿತ ನಡೆಸುತ್ತಿರುವವರು ಈಗ ಕ್ರೀಡಾ ಪ್ರೇಮಿಗಳಿಗೆ ಮೋಸ ಮಾಡುತ್ತಿದ್ದಾರೆ. ಭಾರತ ಪುರುಷರ ತಂಡ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಕೋಟಿ ಕೋಟಿ ರೂಪಾಯಿ ಬಹುಮಾನ ನೀಡುತ್ತೇವೆ ಎಂದು ಘೋಷಣೆ ಮಾಡುತ್ತಿದ್ದಾರೆ.ಆದರೆ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಆರನೇ ಸ್ಥಾನ ಪಡೆದರೂ ಅದೊಂದು ಪವಾಡ. ಏಕೆಂದರೆ ನವದೆಹಲಿಯಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ದುರ್ಬಲ ರಾಷ್ಟ್ರಗಳ ಎದುರು ಗೆದ್ದಿದೆ.

 

ವಿಶ್ವ ಹಾಕಿಯಲ್ಲಿ ಭಾರತ ತಂಡಕ್ಕೆ 11ನೇ ಸ್ಥಾನವಿದೆ. ಇಂತಹ ತಂಡ ಜರ್ಮನಿ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಹಾಲೆಂಡ್‌ನಂತಹ ಬಲಿಷ್ಠ ತಂಡವನ್ನು ಸೋಲಿಸಿ ಪದಕ ಗೆಲ್ಲುವುದು ಕಷ್ಟದ ಮಾತು. ಅಕಸ್ಮಾತ್ ಗೆದ್ದರೆ ಅದೊಂದು ಬೋನಸ್. ಗೆಲ್ಲಲಿ ಎಂದು ಭರವಸೆ ಇಟ್ಟುಕೊಳ್ಳೋಣ.

 

ಆದರೆ ಹಣ ನೀಡುತ್ತೇವೆ ಎಂದು ಹೇಳಿ ಈಗಲೇ ಜನರಿಗೆ ಮೋಸ ಮಾಡಲು ಹೋಗಬಾರದು. ಅದೇ ದುಡ್ಡನ್ನು ದೇಶದ ಹಾಕಿ ಬೆಳವಣಿಗೆಗೆ ವ್ಯಯಿಸಲಿ. ಅದು ನಿಜವಾದ ಕಾಳಜಿ. ಜ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.