ಉಂಗುರದ ವಜ್ರ ನುಂಗಿದ ನಾಯಿ!

7

ಉಂಗುರದ ವಜ್ರ ನುಂಗಿದ ನಾಯಿ!

Published:
Updated:

ಲಂಡನ್‌(ಪಿಟಿಐ): ಇದು ಪ್ರೀತಿಯ ನಾಯಿಯೊಂದು ಉಂಗುರದ ಬೆಲೆಬಾಳುವ ವಜ್ರದ ಹರಳು ನುಂಗಿ ತನ್ನ ಪಾಲಕರಿಗೆ ಪೀಕಲಾಟ ತಂದಿಟ್ಟ ಕತೆ ಇದು.ತರಬೇತಿಯಲ್ಲಿರುವ ಪೊಲೀಸ್‌ ಶ್ವಾನಗಳ ಮೇಲ್ವಿಚಾರಣೆ ಮಾಡುತ್ತಿರುವ ಆ್ಯಂಜಿ ಕಾಲಿನ್ಸ್‌ ಅವರು ವಿವಾಹ ಸಂದರ್ಭದಲ್ಲಿ ಪತಿ ಗ್ರಾಹಾಂ ತೊಡಿಸಿದ 18,000 ಪೌಂಡ್‌ (ಅಂದಾಜು ₨18.36 ಲಕ್ಷ) ಮೌಲ್ಯದ ವಜ್ರದುಂಗರವನ್ನು ಉಗುರು ಅಂದಗೊಳಿಸುವುದಕ್ಕಾಗಿ ತೆಗೆದಿಟ್ಟಿದ್ದರು. ಆಗ ಅವರ ಪ್ರೀತಿಯ ನಾಯಿ ‘ಜಾಕ್’ ಉಂಗುರವನ್ನು ಕಡಿದು ವಜ್ರವನ್ನು ನುಂಗಿತ್ತು.ಮನೆಯಲ್ಲೆಲ್ಲಾ ಹುಡುಕಿದ ದಂಪತಿಗೆ ವಜ್ರವು  ಎರಡು ದಿನಗಳ ತರುವಾಯ ನಾಯಿಯ ಮಲದಲ್ಲಿ ದೊರಕಿತು. ಈ ಎರಡು ದಿನಗಳು ಅವರು ಹೊಟ್ಟೆ­ಉಬ್ಬಿಸಿ­ಕೊಂಡಿದ್ದ ನಾಯಿಯ ಹಿಂದಿಂದೆಯೇ ತಿರುಗುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry