ಮಂಗಳವಾರ, ಜೂನ್ 15, 2021
24 °C

ಉ.ಕ.ದಲ್ಲಿ ಕೆಎಟಿ ಪೀಠ ಸ್ಥಾಪನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಆಡ­ಳಿತ ನ್ಯಾಯಮಂಡಳಿಯ (ಕೆಎಟಿ) ಪೀಠವನ್ನು ಉತ್ತರ ಕರ್ನಾಟಕ ಯಾವುದೇ ಪ್ರದೇಶ­ದಲ್ಲಿ ಸ್ಥಾಪಿಸು­ವುದು ಕಾರ್ಯ­ಸಾಧು­­ವಲ್ಲ ಎಂದು ಬೆಂಗಳೂರು ವಕೀಲರ ಸಂಘ ಗುರುವಾರ ನಿರ್ಣಯಿಸಿದೆ.‘ಯಾರೋ ಉಪವಾಸ ಕುಳಿ­ತರು ಎಂಬ ಕಾರಣಕ್ಕೆ ಕೆಎಟಿ ಪೀಠವನ್ನು ಉತ್ತರ ಕರ್ನಾಟಕ­ದಲ್ಲಿ ಆರಂಭಿಸ­ಬೇಕಿಲ್ಲ. ಅಲ್ಲಿ ಆರಂ­ಭಿಸಿ ಎಂದು ಸರ್ಕಾರಿ ನೌಕ­ರ­ರು ಕೋರಿಲ್ಲ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್‌ ತಿಳಿಸಿದರು.‘ಪ್ರಕರ­ಣ­­ಗಳ ಶೀಘ್ರ ಇತ್ಯರ್ಥಕ್ಕೆ ಬೆಂಗ­ಳೂರಿನಲ್ಲೇ ಇನ್ನೊಂದು ಪೀಠ­ ರಚಿಸ­ಬಹುದು. ಸಂಘದ ನಿರ್ಣ­ಯ ಪ್ರತಿಯನ್ನು ಹೈಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಡಿ.ಎಚ್‌.ವಘೇಲಾ, ಮುಖ್ಯ­ಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಸಲ್ಲಿಸಲಾಗು­ವುದು’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.