ಉಕ್ಕಿದ ನದಿ- ನೂರಾರು ಗ್ರಾಮಗಳು ಜಲಾವೃತ

ಮಂಗಳವಾರ, ಜೂಲೈ 23, 2019
20 °C

ಉಕ್ಕಿದ ನದಿ- ನೂರಾರು ಗ್ರಾಮಗಳು ಜಲಾವೃತ

Published:
Updated:

ಪಟ್ನಾ (ಐಎಎನ್‌ಎಸ್): ರಾಜ್ಯದಾದ್ಯಂತ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನೂರಾರು ಗ್ರಾಮ ಜಲಾವೃತಗೊಂಡಿವೆ.ಪೂರ್ಣಿಯಾ, ಅರಾರಿಯಾ, ಕೃಷ್ಣಗಂಜ್, ಮುಜಾಫರ್ ಮತ್ತು ಕತಿಹಾರ್ ಜಿಲ್ಲೆಗಳಲ್ಲಿ ಪ್ರವಾಹ ಬಂದಿದ್ದು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.ಮಹಾನಂದಾ, ಭಾಗಮತಿ, ಕೋಸಿ ನದಿಗಳು ಸೇರಿ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಪಾಯದ ಪ್ರದೇಶದಲ್ಲಿರುವ ಗ್ರಾಮಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಬಿಹಾರ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.ಉ.ಪ್ರ: ಮತ್ತಿಬ್ಬರ ಸಾವು

ಲಖನೌ (ಪಿಟಿಐ): ಉತ್ತರಪ್ರದೇಶದಲ್ಲಿ ಮಳೆಯ ಆರ್ಭಟ ಗುರುವಾರವೂ ಮುಂದುವರಿದಿದ್ದು, ಇಬ್ಬರು ಸಿಡಿಲು ಮತ್ತು ಪ್ರವಾಹಕ್ಕೆ ಬಲಿಯಾಗಿರುವುದರಿಂದ  ಮಳೆಯ ಅನಾಹುತದಿಂದ ಸತ್ತವರ ಸಂಖ್ಯೆ 120ಕ್ಕೆ ಏರಿದೆ.ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಸಿಡಿಲು ಬಡಿದು ಒಬ್ಬ ಸತ್ತಿದ್ದರೆ, ಬಾರಾಬಂಕಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಒಬ್ಬ ಬಲಿಯಾಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry