ಉಕ್ಕಿದ ಭೀಮೆ: ಹಳ್ಳ, ಕೊಳ್ಳಕೆ್ಕ ಮರುಜೀವ

7

ಉಕ್ಕಿದ ಭೀಮೆ: ಹಳ್ಳ, ಕೊಳ್ಳಕೆ್ಕ ಮರುಜೀವ

Published:
Updated:

ಚಡಚಣ: ಸುಮಾರು ಮೂರು ದಿನ ಗಳಿಂದ ಚಡಚಣ ಹಾಗೂ ಬಳ್ಳೊಳ್ಳಿ ಕಂದಾಯ ಗ್ರಾಮಗಳಲ್ಲಿ ಸುರಿಯುತ್ತಿ ರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು,ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಗದ್ದೆಗಳೆಲ್ಲ ಅಪಾರ ಪ್ರಮಾಣದ ನೀರು ನಿಂತಿದೆ. ಮೂರು ದಿನಗಳಲ್ಲಿ ಸರಾಸರಿ 45 ಮಿ.ಮಿ ನಷ್ಟು ಮಳೆಯಾದ ವರದಿ ಯಾಗಿದೆ.ಭೀಮಾ ನದಿಗೆ ಉಜನಿ ಜಲಾಶಯ ದಿಂದ ಸುಮಾರು ಒಂದು ಲಕ್ಷ ಕೂಸೆಕ್‌ ನೀರನ್ನು ಹೊರ ಬಿಟ್ಟಿರುವುದರಿಂದ ಅಪಾಯದ ಮಟ್ಟದಲ್ಲಿ  ಭೀಮಾ ನದಿಯಲ್ಲಿ ನೀರು ಹರಿಯುತ್ತಿದೆ. ರಾಜ್ಯದ ಗಡಿ ಅಂಚಿನಲ್ಲಿರುವ ಉಮರ್ಜಿ, ಉಮರಾಣಿ, ಶಿರನಾಳ, ಹಿಂಗಣಿ ಸೇರಿದಂತೆ ಪ್ರಮುಖ 8 ಬಾಂದಾರ ಕಮ್‌ ಬ್ರಿಜ್‌ಗಳ ಮೇಲೆ ಸುಮಾರು 3 ಅಡಿಗಳಷ್ಟು ನೀರು ಶುಕ್ರವಾರ ಹರಿಯುತ್ತಿದೆ. ಇದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.ಶುಕ್ರವಾರ ಸಂಜೆ ರಾಜ್ಯದ ಅಂಚಿನಲ್ಲಿರುವ ಟಾಕಳಿ ಸೇತುವೆ ಕೆಳಗೆ ಸುಮಾರು 1.20.000 ಸಾವಿರ್‌ ಕ್ಯೂಸೆಕ್‌ ನೀರು ಹರಿಯುತ್ತಿರುವುದು ದಾಖಲಾಗಿದೆ. ಭೀಮಾನದಿಗೆ ಅಳವಡಿ ಸಲಾದ ರೈತರ ನೂರಾರ ಪಂಪ್‌ಸೆಟ್‌ ಗಳು ನೀರಿಗೆ ಆಹುತಿಯಾಗಿವೆ. ಸಮೀಪದ ಹಲಸಂಗಿ ಗ್ರಾಮಕ್ಕೆ ಹೊಂದಿ ಕೊಂಡಿರುವ ಹಳ್ಳಕ್ಕೆ ಅಪಾರ ಪ್ರಮಾ ಣದ ನೀರು ಹರಿಯುತ್ತಿದೆ. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಈ ಹಳ್ಳಕ್ಕೆ ನಿರ್ಮಿಸಿದ ಸೇತುವೆಯ ಮೇಲೆ ಸುಮಾರು 5 ಅಡಿಗಳಷ್ಟು ನೀರು ಹರಿ ಯುತ್ತಿತ್ತು. ಇದರಿಂದ ಅಹೋರಾತ್ರಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು.ಗುರುವಾರ ಸಂಜೆಯಿಂದ ಶುಕ್ರ ವಾರದ ಬೆಳಗಿನವರೆಗೆ ಮಣಂಕಲಗಿ, ಲೋಣಿ, ಹಲಸಂಗಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಅಪಾರ ಪ್ರಮಾಣದ ಮಳೆಯಿಂದಾಗಿ ಬೆಳದು ನಿಂತ ಮೆಕ್ಕೆಜೋಳ, ತೋಗರಿ ಬೆಳೆ ಗದ್ದೆಗಳಲ್ಲಿ ಅಪಾರ    ಪ್ರಮಾಣದಲ್ಲಿ ನೀರು ತುಂಬಿ ನಿಂತಿವೆ. ಇದರಿಂದಾಗಿ ತೊಗರಿ ಬೆಳೆಗೆ ಹೆಚ್ಚಿನ ನಷ್ಟ ಉಂಟಾಗಲಿದೆ ಎನ್ನುತ್ತಾರೆ ಲೋಣಿ ಗ್ರಾಮದ ರೈತ ಅರವಿಂದ ಹಾವಿನಾಳ,ಕಳೆದ ಮೂರು ವರ್ಷಗಳಿಂದ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿ ರುವುದಿಲ್ಲ. ಬರ ಬೀಳುವುದಕ್ಕಿಂತ ಅತಿವೃಷ್ಟಿಯಾಗುವುದೇ ಲೇಸು. ಕುಡಿಯೋಕೆ ನೀರಾದರೂ ಸಿಗುತ್ತೆ ಎನ್ನುತ್ತಾರೆ ಗೋಡಿಹಾಳ ಗ್ರಾಮದ ಶ್ರೀಮಂತ ಪೂಜಾರಿ. 

ಜನಜೀವನ ಅಸ್ತವ್ಯಸ್ತ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ವಾಗಿದೆ. ಶಾಲೆ ಕಾಲೇಜುಗಳಿಗೆ, ಕಚೇರಿಗೆ ತೆರಳುವವರಿಗೆ ಮಳೆ ಕಿರಿಕಿರಿಯನ್ನುಟ್ಟು ಮಾಡಿದೆ. ಕೆಲವು ಮನೆಗಳಲ್ಲಿ ನೀರು ನುಗ್ಗಿದ್ದರೆ ಇನ್ನೂ ಹಲಸಂಗಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ಕೆಲವು ಮನೆಗಳ ಗೊಡೆಗಳು ಭಾಗಶ: ಕುಸಿದಿರುವುದು ವರಿದಿಯಾಗಿವೆ.ರೈತರ ಹರ್ಷ: ಸದಾ ಬರಗಾಲಕ್ಕೆ ತುತ್ತಾಗುವ ಚಡಚಣ ಹಾಗೂ ಬಳ್ಳೊಳ್ಳಿ ಕಂದಾಯ ಗ್ರಾಮಗಳಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿ ರುವುದರಿಂದ ಒಣ ಬೇಸಾಯ ನಂಬಿ ಒಕ್ಕಲುತನ ಮಾಡುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 

ಬೋರಿ ಹಳ್ಳಕ್ಕೆ ನೀರು: ಕಳೆದ ಸಾಲಿನಲ್ಲಿ ನೀರು ಕಾಣದ ಚಡಚಣದ ಬೋರಿ ಹಳ್ಳ ಹಾಗೂ ಶಿರಾಡೋಣ, ರೇವತಗಾಂವ ಗ್ರಾಮದ ಹಳ್ಳಗಳಿಗೆ ಈ ಬಾರಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿರುವದರಿಂದ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry