ಗುರುವಾರ , ಜೂನ್ 24, 2021
28 °C

ಉಕ್ಕು ತಯಾರಿಕೆ 62ಲಕ್ಷ ಟನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಭಾರತದ ಉಕ್ಕು ತಯಾರಿಕೆ ಫೆಬ್ರು­ವರಿಯಲ್ಲಿ ಶೇ 3.2 ರಷ್ಟು ಕುಸಿದು 62.8 ಲಕ್ಷ ಟನ್‌ಗಳಿಗೆ ಇಳಿಕೆ ಕಂಡಿದೆ. 2013ನೇ ಸಾಲಿನ ಫೆಬ್ರು­ವರಿಯಲ್ಲಿ 64.8 ಲಕ್ಷ ಟನ್‌ ಉಕ್ಕು ತಯಾರಿಸಲಾ­ಗಿತ್ತು ಎಂದು ವಿಶ್ವ ಉಕ್ಕು ತಯಾರಿಕಾ ಕಂಪೆನಿ­ಗಳ ಒಕ್ಕೂಟ (ಡಬ್ಲ್ಯುಎಸ್‌ಎ) ಹೇಳಿದೆ.ಉಕ್ಕು ತಯಾರಿಕೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನ­ದ­ಲ್ಲಿದೆ. 2014ರ ಮೊದಲ ಎರಡು ತಿಂಗಳಲ್ಲಿ 132 ಲಕ್ಷ ಟನ್‌ ಉಕ್ಕು ತಯಾರಿಸಲಾಗಿದೆ.ಫೆಬ್ರುವರಿಯಲ್ಲಿ ಚೀನಾದಲ್ಲಿ 621 ಲಕ್ಷ ಟನ್‌, ಜಪಾನ್‌ನಲ್ಲಿ 84 ಲಕ್ಷ ಟನ್‌, ದಕ್ಷಿಣ ಕೊರಿಯಾದಲ್ಲಿ 53 ಲಕ್ಷ ಟನ್‌, ಜರ್ಮನಿಯಲ್ಲಿ 36 ಲಕ್ಷ ಟನ್‌, ಇಟಲಿಯಲ್ಲಿ 22 ಲಕ್ಷ ಟನ್‌, ಫ್ರಾನ್ಸ್‌ ನಲ್ಲಿ 12 ಲಕ್ಷ ಟನ್‌ ಉಕ್ಕು ತಯಾರಿಸ ಲಾಗಿದ್ದು, ಒಟ್ಟಾರೆ ಜಾಗತಿಕ ಉಕ್ಕು ತಯಾರಿಕೆ 1242 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದ್ದು, ಶೇ 0.6­ರಷ್ಟು ಅಲ್ಪ ಪ್ರಗತಿ ಕಂಡಿದೆ. ಏಷ್ಯಾ ದೇಶಗಳ ಉಕ್ಕು ತಯಾರಿಕೆ ಶೇ 0.6ರಷ್ಟು ಏರಿಕೆಯಾಗಿ  837 ಲಕ್ಷ ಟನ್‌ ತಲುಪಿದೆ. ಯೂರೋಪ್‌ ಒಕ್ಕೂಟ 138 ಲಕ್ಷ ಟನ್‌ ಉಕ್ಕು ತಯಾರಿ­ಸಿದ್ದು ಶೇ  4.7ರಷ್ಟು ಪ್ರಗತಿ ದಾಖಲಿಸಿದೆ.ಅಮೆರಿಕದ ಉಕ್ಕು ತಯಾರಿಕೆ ಫೆಬ್ರು ವರಿಯಲ್ಲಿ 67 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ. ಇದೇ ವೇಳೆ ಗಲಭೆ ಪೀಡಿತ ಉಕ್ರೇನ್‌ನಲ್ಲಿ ಶೇ 10.7ರಷ್ಟು ಕುಸಿದಿದ್ದು 23 ಲಕ್ಷ ಟನ್‌ಗಳಿಗೆ ತಗ್ಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.