ಸೋಮವಾರ, ಜನವರಿ 20, 2020
29 °C

ಉಕ್ಕು ದರ ಏರಿಕೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ದೇಶದ ಮಾರುಕಟ್ಟೆ ಯಲ್ಲಿನ ಉಕ್ಕು ದರ ಶೀಘ್ರದಲ್ಲೇ ಪ್ರತಿ ಟನ್‌ಗೆ ₨1000ದಷ್ಟು ಏರಿಕೆಯಾಗ ಲಿದೆ ಎಂದು ರಾಷ್ಟ್ರೀಯ ಖನಿಜಗಳ ಅಭಿ ವೃದ್ಧಿ ನಿಗಮ(ಎನ್‌ಎಂಡಿಸಿ) ಅಧಿಕಾರಿ ಗಳು ಭವಿಷ್ಯ ನುಡಿದಿದ್ದಾರೆ.ಭಾರತೀಯ ರೈಲ್ವೆ ಸರಕು ಸಾಗಣೆ ದರ ಏರಿಸಿದೆ. ಕಬ್ಬಿಣದ ಅದಿರು ಬೆಲೆ ಯಲ್ಲೂ ಹೆಚ್ಚಳವಾಗಿದೆ. ಇದೆಲ್ಲದ ರಿಂದಾಗಿ ಮಾರುಕಟ್ಟೆಯಲ್ಲಿ ಉಕ್ಕು ಮಾರಾಟ ದರದಲ್ಲಿ ಸದ್ಯದಲ್ಲೇ ಏರಿಕೆ ಕಂಡು ಬರುವ ಸಾಧ್ಯತೆ ಇದೆ ಎಂದು ‘ಎನ್‌ಎಂಡಿಸಿ’ಯ ವಾಣಿಜ್ಯ ವಹಿವಾಟು ವಿಭಾಗದ ನಿರ್ದೇಶಕ ಟಿ.ಕೆ.ಚಾಂದ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.‘ಎನ್‌ಎಂಡಿಸಿ’ ಡಿಸೆಂಬರ್‌ ಆರಂಭ­ದಲ್ಲಿ ಕಬ್ಬಿಣದ ಅದಿರು ದರ ವನ್ನು ಟನ್‌ಗೆ ₨200ರಷ್ಟು ಹೆಚ್ಚಿಸಿದೆ. ಇದ­ರಿಂದ ಪ್ರತಿ ಟನ್‌ ಉಕ್ಕು ತಯಾರಿಕೆ ವೆಚ್ಚ ₨320ರಷ್ಟು ಹೆಚ್ಚುತ್ತದೆ ಎಂದಿದ್ದಾರೆ.ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ 482 ಲಕ್ಷ ಟನ್‌ಗಳಷ್ಟು ಉಕ್ಕು ಬಳಕೆಯಾಗಿದೆ. ಆರ್ಥಿಕ ಅಸ್ಥಿರತೆಯಿಂದ ಕಾಮಗಾರಿ  ಕುಂಠಿತವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಉಕ್ಕು ಬಳಕೆ ಶೇ 0.4ರಷ್ಟು ಮಾತ್ರ ಏರಿಕೆ ಕಂಡಿದೆ ಎಂದು ಉಕ್ಕು ಸಚಿವಾಲಯ ಹೇಳಿದೆ.

ಪ್ರತಿಕ್ರಿಯಿಸಿ (+)