ಭಾನುವಾರ, ಜೂನ್ 13, 2021
21 °C

ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ, ಐಎಎನ್‌ಎಸ್‌): ಉಕ್ರೇನ್‌ ಗಡಿಗೆ ಹೊಂದಿಕೊಂಡಿರುವ ಮೂರು ಪ್ರಾಂತ್ಯ­ಗಳಲ್ಲಿ ತನ್ನ ಯುದ್ಧ ಟ್ಯಾಂಕ್‌ಗಳು, ಫಿರಂಗಿ­­ಗಳು ಹಾಗೂ ಸೈನಿಕರು ನಿಯೋ­ಜನೆಗೊಂಡು ಸಮರ ತರಬೇತಿಯಲ್ಲಿ ತೊಡ­­ಗಿರುವುದಾಗಿ ರಷ್ಯಾ ಗುರುವಾರ ತಿಳಿಸಿದೆ.  ಅಲ್ಲದೆ, ಉಕ್ರೇನ್‌ ಗಡಿಯಲ್ಲಿ ರಷ್ಯಾದ ಸಾವಿ­ರಾರು ಅರೆಸೇನಾಪಡೆ ಸೈನಿಕರು ಪಥಸಂಚಲನ ನಡೆಸುತ್ತಿದ್ದಾರೆ. ಜೊತೆಗೆ ಕ್ರಿಮಿಯಾ­ದಲ್ಲಿ ಜನಮತಗಣನೆಗೂ ಪೂರ್ವಭಾವಿ­ಯಾಗಿ ತನ್ನ ಸೈನಿಕರು ಗಸ್ತು ತಿರುಗುತ್ತಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ರಾಸ್ತೋವ್‌, ಬೆಲ್ಗೊರಾಡ್‌, ಕುರ್ಷ್ಕ್ ಪ್ರಾಂತ್ಯಗಳಲ್ಲಿ ತನ್ನ ಸೇನೆ ಗಡಿ ಕಾಯು­­ ತ್ತಿದ್ದು, ಮಾರ್ಚ್‌ ಅಂತ್ಯದವರೆಗೂ ಉಕ್ರೇನ್‌ ಗಡಿಯಲ್ಲಿರು­ವುದು ಎಂದು ರಷ್ಯಾ  ತಿಳಿಸಿದೆ.ಈ ಮಧ್ಯೆ, ಉಕ್ರೇನ್‌ ಆಕ್ರಮಣದ ಸಾಧ್ಯತೆ ಕಾರಣ ಕ್ರಿಮಿಯಾದಲ್ಲಿ ರಷ್ಯಾ ಸೇನಾ ತುಕಡಿ ನಿಯೋಜನೆಗೊಂಡಿದೆ ಎಂದು ಮಾಜಿ ಸೋವಿಯತ್‌ ಒಕ್ಕೂಟ ರಾಷ್ಟ್ರಗಳೊಂದಿಗಿನ ರಷ್ಯಾ ಸಂಸತ್‌ ಬಾಂಧವ್ಯ ಸಮಿ­ತಿ ಮುಖ್ಯಸ್ಥ ಲಿಯೋ ನಿಡ್‌ ಸ್ಲಟ್‌ಸ್ಕಿ ಹೇಳಿದ್ದಾರೆ.ಹೊಸ ಸೇನಾಪಡೆ ರಚನೆ

ಕೀವ್‌ ವರದಿ:
ಉಕ್ರೇನ್‌ ಸಂಸತ್‌, ದೇಶದ ರಕ್ಷಣಾ ಸಾಮರ್ಥ್ಯ ಬಲಪ ಡಿಸಲು ‘ನ್ಯಾಷನಲ್‌ ಗಾರ್ಡ್‌’ ಹೆಸರಿನ ಹೊಸ ಸೇನಾಪಡೆ ರಚಿಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.ಸುಮಾರು 60 ಸಾವಿರ ಯೋಧರನ್ನು ಹೊಂದುವ ಈ ಪಡೆಗಳಲ್ಲಿ ಸೈನಿಕರು, ಮಾಜಿ ಸೈನಿಕರು, ಸ್ವಯಂ ಸೇವಕರು, ನಾಗರಿಕರು, ಸರ್ಕಾರಿ ವಿರೋಧಿ ರ್‍್ಯಾಲಿ­ಗಳಲ್ಲಿ ಭಾಗವಹಿಸಿದ ಪ್ರತಿಭಟ ನಾಕಾ­ರರು ಇರುವರು ಎಂದು ‘ಕ್ಸಿನ್‌ ಹುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.ದೇಶದ ದಕ್ಷಿಣದಲ್ಲಿರುವ ಸ್ವಾಯತ್ತ ಕ್ರಿಮಿಯಾ ಗಣರಾಜ್ಯದಲ್ಲಿ ರಷ್ಯಾ ಸೇನೆ ನಿಯೋಜನೆಗೊಂಡ ನಂತರ ಉದ್ವಿಗ್ನತೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್‌ ಈ ಕ್ರಮ ಕೈಗೊಂಡಿದೆ.ಒಬಾಮ ವಿರೋಧ

ವಾಷಿಂಗ್ಟನ್‌ ವರದಿ:
ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯದಲ್ಲಿ ರಷ್ಯಾ­ದೊಂ ದಿಗೆ ವಿಲೀನವಾಗುವ ಅವಸರದ ಜನ ಮತಗಣನೆ ಕೈಗೊಳ್ಳುವುದನ್ನು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ತಿರಸ್ಕರಿಸಿ ದ್ದಾರೆ. ಅಲ್ಲದೆ, ರಷ್ಯಾ ಜತೆ ಸಂಘ­ರ್ಷ­ ನಡೆಸಿರುವ ಉಕ್ರೇನ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.ಈ ಮಧ್ಯೆ, ಐರೋಪ್ಯ ಒಕ್ಕೂಟದ ಜತೆ ಮುಂದಿನ ವಾರ ಉಕ್ರೇನ್‌ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್‌ ಶ್ವೇತಭವನದಲ್ಲಿ ಒಬಾಮ ಜತೆ  ಚರ್ಚಿಸಿದ ಬಳಿಕ ತಿಳಿಸಿದ್ದಾರೆ.ಒಇಸಿಡಿ ಸದಸ್ಯತ್ವ ಸ್ಥಗಿತ

ಪ್ಯಾರಿಸ್‌ ವರದಿ:
ರಷ್ಯಾಗೆ ತನ್ನ ಸದ­ಸ್ಯತ್ವ ನೀಡುವ ಪ್ರಕ್ರಿಯೆ ಮುಂದೂ­ಡಿ­­ರುವ ಆರ್ಥಿಕ ಸಹಕಾರ ಮತ್ತು ಅಭಿ­ವೃದ್ಧಿ ಸಂಸ್ಥೆ (ಒಇಸಿಡಿ), ತನ್ನೊಂದಿಗೆ ಸಹ ಕಾರ ಬಲಪಡಿಸಬೇಕೆಂಬ ಉಕ್ರೇನ್‌ ಮನವಿಗೆ ಒಪ್ಪಿಗೆ ನೀಡಿದೆ.ಜರ್ಮನಿ ಎಚ್ಚರಿಕೆ

ಬರ್ಲಿನ್‌ ವರದಿ:
ಉಕ್ರೇನ್‌ ವಿರುದ್ಧ ಘರ್ಷಣೆ ಮುಂದುವರಿಸಿದರೆ ರಷ್ಯಾ ಗಂಭೀರ ಆರ್ಥಿಕ ಮತ್ತು ರಾಜಕೀಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜರ್ಮನಿ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.