ಗುರುವಾರ , ಜೂನ್ 17, 2021
27 °C

ಉಕ್ರೇನ್‌ ಸೇನಾ ನೆಲೆ ಮೇಲೆ ರಷ್ಯಾ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀವ್‌ (ಐಎಎನ್‌ಎಸ್‌/ಇಎಫ್‌ಇ): ಶಸ್ತ್ರಸಜ್ಜಿತ ವಾಹನಗಳ ಸಮೇತ ರಷ್ಯಾ ಬೆಂಬಲಿತ ಪಡೆಗಳು ಶನಿವಾರ ಉಕ್ರೇನ್‌ ಬಾಲ್‌ಬೆಕ್‌ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಒಬ್ಬ ಪತ್ರಕರ್ತ ಗಾಯಗೊಂಡಿದ್ದಾನೆ.ಕನಿಷ್ಠ ಆರು ಕಾರುಗಳಲ್ಲಿ ಧಾವಿಸಿದ ರಷ್ಯಾ ಪಡೆಗಳು ನೌಕಾ ನೆಲೆಯತ್ತ ಗ್ರೆನೆಡ್‌ ದಾಳಿ ನಡೆಸಿವೆ. ಕ್ರಿಮಿಯಾ ಗಣರಾಜ್ಯದೊಳಗಿನ ಬಾಲ್‌ಬೆಕ್‌ ಸೇನಾ ನೆಲೆಯ ಕಮಾಂಡರ್‌ಗಳು ರಷ್ಯಾದ ಜತೆ ಸೇರಬೇಕು ಇಲ್ಲವೆ ಶರಣಾಗಬೇಕು ಎಂದು ಗಡುವು ನೀಡಲಾಗಿತ್ತು ಎನ್ನಲಾಗಿದೆ.ರಷ್ಯಾ ಪರ ಇರುವ ಕ್ರಿಮಿಯಾದ ಸ್ವಯಂರಕ್ಷಣಾ ಪಡೆಯ ಹೆಸರಿನಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಉಕ್ರೇನ್‌ ಮಾಧ್ಯಮಗಳು ವರದಿ ಮಾಡಿವೆ.‘ದಾಳಿಯ ನಂತರವೂ ಸೇನಾ ನೆಲೆಯ ನ್ನು ರಷ್ಯಾಗೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ’ ಎಂದು ನೆಲೆಯ ಕಮಾಂಡರ್‌ ಯೂಲಿ ಮ್ಯಾಮ್‌ಚೊರ್‌ ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.