ಉ.ಕ. ಅಭಿವೃದ್ಧಿಗೆ ಸಹಿ ಸಂಗ್ರಹ ಚಳವಳಿ

7

ಉ.ಕ. ಅಭಿವೃದ್ಧಿಗೆ ಸಹಿ ಸಂಗ್ರಹ ಚಳವಳಿ

Published:
Updated:

ಮುದ್ದೇಬಿಹಾಳ: `ಸರ್ಕಾರ ನಡೆಸುತ್ತಿರುವವರಿಗೆ ಉತ್ತರ ಕರ್ನಾಟಕದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಈ ಬಗ್ಗೆ ಮನವರಿಕೆ ಮಾಡಿಕೊಡುವ ಮನಸ್ಸು ಇಲ್ಲಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳಿಗೆ ಇಲ್ಲವೇ ಇಲ್ಲ~ ಎಂದು ಮಾಜಿ ಶಾಸಕ  ಎಂ. ಎಂ. ಸಜ್ಜನ ಹೇಳಿದರು.   ಗುರುವಾರ ಮಂಗಳೂರಿನ ಎಂ.ಆಯ್.ಎಫ್.ಟಿ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಹಾಗೂ ಅರಿಹಂತ ಚಾರಿಟೇಬಲ್ ಸಮಾಜ ಕಾರ್ಯ  ಮಹಾವಿದ್ಯಾಲಯದ ಸಹಯೋಗದಲ್ಲಿ  `ಸಮಾಜ ಕಾರ್ಯ ಗ್ರಾಮ ಶಿಬಿರ 2011~ ರ ನಿಮಿತ್ತ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸಹಿ ಸಂಗ್ರಹ ಚಳವಳಿ ಉದ್ದೇಶಿಸಿ ಅವರು ಮಾತನಾಡಿದರು.ಉತ್ತರ ಕರ್ನಾಟಕ ವಿಶೇಷವಾಗಿ ವಿಜಾಪುರ ಜಿಲ್ಲೆ ಎಲ್ಲ ರೀತಿಯ ಅಭಿವೃದ್ಧಿಯಿಂದ ವಂಚಿತವಾಗಿದೆ. ಸಂವಿಧಾನದ 371 ನೇ ಕಲಮಿನ ಅನ್ವಯ ಹೈದ್ರಾಬಾದ್ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಅಭಿವೃದ್ಧಿಗೆ ಸೇರಿಸಿಕೊಂಡಂತೆ ಅದೇ ಗುಂಪಿನಲ್ಲಿ ವಿಜಾಪುರ ಜಿಲ್ಲೆಯನ್ನು ಸೇರಿಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.ರ‌್ಯಾಲಿ ಉದ್ದೇಶಿಸಿ  ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಪ್ರಭು ದೇಸಾಯಿ,  ಉತ್ತರ ಕರ್ನಾಟಕದ ಬಗೆಗಿನ ಮಲತಾಯಿ ಧೋರಣೆ ತೊಲಗದ ಹೊರತೂ ಈ ಭಾಗದ ಅಭಿವೃದ್ಧಿ ಸಾಧ್ಯವಿಲ್ಲ. ಜನರು ಹಾಗೂ ಜನಪ್ರತಿನಿಧಿಗಳು ಸಂಘಟಿತ ಹೋರಾಟ ಮಾಡುವ ಮೂಲಕ ಅಭಿವೃದ್ಧಿ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.ವಂದೇ ಮಾತರಂ ಸಮಾಜ ಕಾರ್ಯ ಒಕ್ಕೂಟದ ನೇತೃತ್ವದಲ್ಲಿ ನಡೆದ ಸಹಿ ಸಂಗ್ರಹಣಾ ಕಾರ್ಯಕ್ಕೆ ಕರ್ನಾಟಕ ಬ್ಯಾಂಕ್ ನಿರ್ದೇಶಕರಾದ ಚನ್ನಪ್ಪಣ್ಣ ಕಂಠಿ ಚಾಲನೆ ನೀಡಿದರು. ರ‌್ಯಾಲಿ ಉದ್ದೇಶಿಸಿ ಮಂಜುನಾಥ ಹೊಸಮನಿ, ಪ್ರಾಚಾರ್ಯರಾದ ಎಸ್.ಕೆ.ಹರನಾಳ ಮಾತನಾಡಿದರು.ಪಟ್ಟಣದ ಎಂ.ಜಿ.ವ್ಹಿ.ಸಿ. ಕಾಲೇಜಿನಿಂದ ಆರಂಭವಾದ ರ‌್ಯಾಲಿಯಲ್ಲಿ ಜೇ. ಸಿ. ಅಧ್ಯಕ್ಷ ರವಿ ತಡಸದ, ಕಾರ್ಯದರ್ಶಿ ರವಿ ಗೂಳಿ, ಗಂಗಾಧರ ಪವಾಡಶೆಟ್ಟಿ, ಮಂಜುನಾಥ ಹೊಸಮನಿ, ಬಿ.ಆರ್. ಢವಳಗಿ, ಸುರೇಶ ನಾಲತವಾಡ, ಮುದ್ದೇಶ ಹೆಬ್ಬಾಳ, ಬಸವರಾಜ ಜಂಗಮರ,ಮಿಲಿಂದ ಅಗರಖೇಡ, ಮಂಗಳೂರಿನ ಎಂ.ಆಯ್.ಎಫ್.ಟಿ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಹಾಗೂ ಅರಿಹಂತ ಚಾರಿಟೇಬಲ್ ಸಮಾಜ ಕಾರ್ಯ  ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಟ್ಟಣದ ಜನತೆಯ ಸಹಿ ಉಳ್ಳ ಮನವಿಯನ್ನು ತಹಸೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಅವರಿಗೆ ಪ್ರಭು ದೇಸಾಯಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry