ಸೋಮವಾರ, ಡಿಸೆಂಬರ್ 16, 2019
17 °C
ತುರ್ತಾಗಿ ಇಳಿದ ಹೆಲಿಕಾಪ್ಟರ್

ಉಗ್ರರಿಂದ ಟರ್ಕಿ ಪ್ರಜೆಗಳ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್ (ಐಎಎನ್‌ಎಸ್): ಹವಾಮಾನ ವೈಪರೀತ್ಯದಿಂದಾಗಿ ಇಲ್ಲಿನ ಲೋಗರ್ ಪ್ರಾಂತ್ಯದಲ್ಲಿ ಭಾನುವಾರ ತುರ್ತಾಗಿ ಕೆಳಗಿಳಿದ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ ಒಂಬತ್ತು ಮಂದಿಯನ್ನು ತಾಲಿಬಾನ್ ಉಗ್ರಗಾಮಿಗಳು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.`ಅಜ್ರಾ ಜಿಲ್ಲೆಯ ದರೈ ಮಂಗಾ ಪ್ರದೇಶದಲ್ಲಿ ತುರ್ತಾಗಿ ಇಳಿದ ಹೆಲಿಕಾಪ್ಟರ್ ಅನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದರೂ ಅದರಲ್ಲಿದ್ದ ನಾಗರಿಕರು ನಾಪತ್ತೆಯಾಗಿದ್ದಾರೆ' ಎಂದು ಲೋಗರ್ ಪ್ರಾಂತ್ಯದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಅಪಹರಣಕ್ಕೊಳಗಾದವರಲ್ಲಿ ಎಂಟು ಮಂದಿ ಟರ್ಕಿ ಪ್ರಜೆಗಳಾಗಿದ್ದು ಒಬ್ಬ ಮಾತ್ರ ಅಫ್ಘನ್‌ಗೆ ಸೇರಿದವರಾಗಿದ್ದಾರೆ. ಕಟ್ಟಡ ನಿರ್ಮಾಣ ಇಂಜಿನಿಯರ್‌ಗಳಾಗಿದ್ದ ಟರ್ಕಿ ಪ್ರಜೆಗಳು ಖೋಸ್ಟ್ ಪ್ರದೇಶದಿಂದ ಕಾಬೂಲ್‌ಗೆ ತೆರಳುತ್ತಿದ್ದರು. ಅಪಹರಣಕಾರರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.ಅಫ್ಘನ್ ಮೂಲದ ಖೊರಾಸನ್ ಕಾರ್ಗೊ ಏರ್‌ಲೈನ್ಸ್‌ಗೆ ಸೇರಿದ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆಯಲಾಗಿತ್ತು.

ಕಾಬೂಲ್‌ನಲ್ಲಿನ ನ್ಯಾಟೊ ನೇತೃತ್ವದ ಅಂತರರಾಷ್ಟ್ರೀಯ ಭದ್ರತಾ ಸಹಕಾರ ಪಡೆ (ಐಎಸ್‌ಎಎಫ್) ತಾಲಿಬಾನ್ ನಡೆಸಿದ ಅಪಹರಣವನ್ನು ದೃಢಪಡಿಸಿದೆ. ಟರ್ಕಿಯ ಸುಮಾರು 1800ರಷ್ಟು ಸೈನಿಕರು ಐಎಸ್‌ಎಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)