ಉಗ್ರರ ಒತ್ತೆಯಲ್ಲಿ ಪಾಕ್‌ನ 40 ಮಕ್ಕಳು

ಭಾನುವಾರ, ಮೇ 26, 2019
28 °C

ಉಗ್ರರ ಒತ್ತೆಯಲ್ಲಿ ಪಾಕ್‌ನ 40 ಮಕ್ಕಳು

Published:
Updated:

ಇಸ್ಲಾಮಾಬಾದ್, (ಪಿಟಿಐ): ಈದ್- ಉಲ್- ಫಿತರ್ ಆಚರಣೆಗೆಂದು ವಿಹಾರಕ್ಕೆ ತೆರಳಿದ್ದ ಪಾಕಿಸ್ತಾನದ  ಬಜೌರ್ ಗುಡ್ಡಗಾಡು ಪ್ರದೇಶದ 40 ಬಾಲಕರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬಾಲಕರು 12-18 ವರ್ಷದವರಾಗಿದ್ದು ಗುರುವಾರ ಆಕಸ್ಮಿಕವಾಗಿ ಆಫ್ಘಾನಿಸ್ತಾನದ ಪೂರ್ವ ಕುನಾರ್ ಪ್ರಾಂತ್ಯದ ಗಡಿ ದಾಟಿದಾಗ  ಈ ಘಟನೆ ನಡೆದಿದೆ.ಬಾಲಕರ ಸಂಖ್ಯೆಯ ಬಗ್ಗೆ ಗೊಂದಲವಿದ್ದು ಕೆಲವು ಟಿವಿ ವಾಹಿನಿಗಳು 40 ಎಂದು ವರದಿ ಮಾಡಿದ್ದರೆ ಮತ್ತೆ ಕೆಲವರು 30 ಎಂದು ಹೇಳುತ್ತಿದ್ದಾರೆ.ಉಗ್ರರ ಯಾವ ಗುಂಪು ಬಾಲಕರನ್ನು ಒತ್ತೆಯಾಗಿಟ್ಟುಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಬಜಾಜಪುರ ಮೂಲದ `ತೆಹ್ರಿಕ್-ಎ- ತಾಲಿಬಾನ್ ಪಾಕಿಸ್ತಾನ~ ಎಂಬ ಉಗ್ರ ಸಂಘಟನೆಯ ಉಪ ಮುಖ್ಯಸ್ಥ ಮೌಲ್ವಿ ಫಕೀರ್ ಎಂಬಾತ ಕುನಾರ್‌ನಿಂದ ಈಗ ಇದರ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಪಾಕ್ ಸೇನೆ ಹೇಳಿದೆ.ಈ ಬಾಲಕರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ವಿಫಲರಾದರೆ ಉಗ್ರರು ಅವರನ್ನು ಆತ್ಮಾಹುತಿ ಬಾಂಬ್ ದಾಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಟಿವಿಯೊಂದು ವರದಿ ಮಾಡಿದೆ.

ಒತ್ತೆಯಾಳಾಗಿರುವ ಮಕ್ಕಳನ್ನು ಪತ್ತೆ ಹಚ್ಚಿ ಬಿಡಿಸಿಕೊಂಡು ಬರಲು ಗುಡ್ಡಗಾಡು ಪ್ರದೇಶದ ಯುವಕರ (ಜಿರ್ಗಾ) ತಂಡವನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಐದು ವಾಹನಗಳಲ್ಲಿ ಆಗಮಿಸಿದ ಉಗ್ರರು ಮಕ್ಕಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು ಎಂದು ಡಾನ್ ಟಿವಿ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry