ಉಗ್ರರ ದಾಳಿ: ಒಬ್ಬ ಸಾವು

7

ಉಗ್ರರ ದಾಳಿ: ಒಬ್ಬ ಸಾವು

Published:
Updated:

ಶ್ರೀನಗರ (ಪಿಟಿಐ): ಪಂಚತಾರಾ ಹೋಟೆಲ್‌ಗೆ ಪ್ರವೇಶಿಸಲು ಯತ್ನಿಸಿದ ಉಗ್ರರು ನಡೆಸಿದ ಗುಂಡಿನ ದಾಳಿಗೆ ಒಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಶ್ರೀನಗರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.

ಸೇನಾ ನೆಲೆ ಹತ್ತಿರವಿರುವ ಪಂಚತಾರಾ ಹೋಟೆಲ್ ಬಳಿ ಘಟನೆ ನಡೆದಿದ್ದು, ಮೃತನನ್ನು ಹೋಟೆಲ್‌ನಲ್ಲಿ ಕೆಲಸ ಮಾಡುವ ಫಾರೂಕ್ ಅಹಮದ್ ಎಂದು ಗುರುತಿಸಲಾಗಿದೆ.ಪರಿಂಪೊರ ಪಂತ್‌ಚೌಕ್ ಬೈಪಾಸ್ ರಸ್ತೆ ಬಳಿಯ ಪಂಚತಾರಾ ಹೋಟೆಲ್‌ಗೆ ಪ್ರವೇಶಿಸಲು ಯತ್ನಿಸಿದ ನಾಲ್ಕೈದು ಉಗ್ರರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry