ಬುಧವಾರ, ಮಾರ್ಚ್ 3, 2021
25 °C

ಉಗ್ರರ ವಿರುದ್ಧದ ಸಾರ್ಕ್‌ ಹೋರಾಟಕ್ಕೆ ಪಾಕ್‌ ಬೆಂಬಲ: ಷರೀಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರರ ವಿರುದ್ಧದ ಸಾರ್ಕ್‌ ಹೋರಾಟಕ್ಕೆ ಪಾಕ್‌ ಬೆಂಬಲ: ಷರೀಫ್‌

ಇಸ್ಲಾಮಾಬಾದ್‌(ಪಿಟಿಐ): ಉಗ್ರರು, ಭ್ರಷ್ಟಾಚಾರ ಹಾಗೂ ಅಪರಾಧ ಕೃತ್ಯಗಳ ವಿರುದ್ಧ ಸಾರ್ಕ್‌ ಸದಸ್ಯ ರಾಷ್ಟ್ರಗಳು ನಡೆಸುವ ಹೋರಾಟಕ್ಕೆ ಪಾಕಿಸ್ತಾನ ಬದ್ಧವಾಗಿದ್ದು, ಬೆಂಬಲ ನೀಡುತ್ತದೆ ಎಂದು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಗುರುವಾರ ಹೇಳಿದರು.ಇಲ್ಲಿ ನಡೆಯುತ್ತಿರುವ ಸಾರ್ಕ್‌ ರಾಷ್ಟ್ರಗಳ ಗೃಹಸಚಿವರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನವಾಜ್‌ ಷರೀಫ್‌,  ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ರಾಷ್ಟ್ರೀಯ ಕಾರ್ಯ ಸೂಚಿ ರಚಿಸುತ್ತೇವೆ. ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ತೊಡೆದುಹಾಕಲು ಸರ್ಕಾರ ಸಂಕಲ್ಪ ಮಾಡಿದೆ ಎಂದು ಅವರು ಹೇಳಿದರು. ಸಾರ್ಕ್‌ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಉತ್ತಮ ಮಾನವ ಹಾಗೂ ನೈಸರ್ಗಿಕ ಸಂಪನ್ಮೂಲವಿದೆ. ಆದ್ದರಿಂದ, ಸಾರ್ಕ್‌ ಶಾಂತಿ ಮತ್ತು ಜನರ ಹಿತಕ್ಕೆ ಉತ್ತಮ ವೇದಿಕೆ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.