ಭಾನುವಾರ, ನವೆಂಬರ್ 17, 2019
29 °C

ಉಚಿತ ಆಯಸ್ಕಾಂತ ಚಿಕಿತ್ಸೆ

Published:
Updated:

ತಿ.ನರಸೀಪುರ:  ತಲಕಾಡಿನ ಪಂಚಲಿಂಗ ಪ್ರಕೃತಿ ಆಯುರ್ವೇದ ಯೋಗ ಕುಟೀರದ ವತಿಯಿಂದ ಜುಲೈ 6 ರಿಂದ 12 ರ ವರೆಗೆ ಒಂದು ವಾರ ಕಾಲ ಉಚಿತ ಆಕ್ಯೂಪ್ರೆಶರ್ ಹಾಗೂ ಆಯಸ್ಕಾಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಲಕಾಡು ಹಸ್ತಿಕೇರಿ ಮಠದ ಡಾ.ಸಿದ್ದಮಲ್ಲಿ ಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ.



ಮಾನವನ ಶರೀರದ ವಿಶೇಷ ಬಿಂದುಗಳ ಮೇಲೆ ವಿಧಿವತ್ತಾದ ಒತ್ತಡ ಹಾಕಿ ರೋಗ ನಿವಾರಣೆ ಮಾಡುವ ಪ್ರಾಚೀನ ಕಾಲದ ಪದ್ಧತಿಯೇ ಬೆರಳೊತ್ತು ಅಥವಾ ಅಕ್ಯೂಪ್ರೆಶರ್ ಚಿಕಿತ್ಸೆ. ವೈಜ್ಞಾನಿಕ ಹಿನ್ನೆಲೆಯುಳ್ಳ, ಅಪಾಯರಹಿತ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ. ಈ ಚಿಕಿತ್ಸೆಯಿಂದ ರಕ್ತ ಚಲನೆ, ರೋಗ ನಿರೋಧಕ ಶಕ್ತಿ, ಸ್ಮರಣ ಶಕ್ತಿ, ಸೌಂದರ್ಯ ಅಭಿವೃದ್ಧಿ ಗೊಳ್ಳಲಿದೆ ಎಂದು ಹೇಳಿದರು.



ಯೋಗಗುರು ಬಾಬಾ ರಾಮ ದೇವ್ ಮಾರ್ಗದರ್ಶನದಲ್ಲಿ  ತಲಕಾಡಿನ ಹಸ್ತಕೇರಿಮಠದ ಯೋಗ ಕುಟೀರದಲ್ಲಿ  ಅಕ್ಯೂಪ್ರೆಶರ್, ಸುಜೋಕ್, ವೈಬ್ರೇಷನ್, ಥೆರಪಿ ಚಿಕಿತ್ಸೆ ನೀಡಲಾಗುವುದು. ಕೊಳ್ಳೇ ಗಾಲದ ಪಂಡಿತ ಬಿ.ವಿ.ನಾಗರಾಜು ಚಿಕಿತ್ಸೆ ನೀಡಲಿದ್ದಾರೆ. 



ರಕ್ತದೊತ್ತಡ, ಅಸ್ತಮ, ಅಲ್ಸರ್, ತಲೆನೋವು, ನರದೌರ್ಬಲ್ಯ, ಕಿಡ್ನಿ ತೊಂದರೆ ಸೇರಿದಂತೆ ಹಲವಾರು ತೊಂದರೆಗಳ  ನಿವಾರಣೆಗೆ ಈ ಚಿಕಿತ್ಸೆ ಸಹಕಾರಿಯಾಗಲಿದೆ. ಜುಲೈ 5 ರಂದು ನೋಂದಣಿ ಆರಂಭವಾಗಲಿದೆ. ಜುಲೈ 6 ರಿಂದ 12ರ ವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ 1, ಮಧ್ಯಾಹ್ನ  2 ರಿಂದ 5ರ ವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಪ್ರವೇಶ ಶುಲ್ಕ 30 ರೂಪಾಯಿ ಗಳಾಗಿದೆ. ಹೆಚ್ಚಿನ ವಿವರಗಳಿಗೆ ಪಂಡಿತ ಬಿ.ವಿ.ನಾಗರಾಜು 98864 38401, ಡಾ.ಸಿದ್ಧಮಲ್ಲಿಕಾರ್ಜುನ ಸ್ವಾಮೀಜಿ 9448950418 ಹಾಗೂ ಹಸ್ತಿಕೇರಿ ನಾಗರಾಜು 9900226560 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

 ಅರ್ಜಿ ಆಹ್ವಾನ

ಪಿರಿಯಾಪಟ್ಟಣ: ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಯಲ್ಲಿ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಿ ಶೇ.80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಒಕ್ಕಲಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಸನ್ಮಾನಿಸ ಲಾಗುವುದು ಎಂದು ಒಕ್ಕಲಿಗ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಪಿ.ಅಣ್ಣೇಗೌಡ ತಿಳಿಸಿದ್ದಾರೆ.



ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು  ಅರ್ಹ ವಿದ್ಯಾರ್ಥಿ ಗಳು ಅಂಕಪಟ್ಟಿ ಜೆರಾಕ್ಸ್ ಪ್ರತಿಯನ್ನು ಪಿರಿಯಾಪಟ್ಟಣದ ಒಕ್ಕಲಿಗ ಹಿತ ರಕ್ಷಣಾ ಸಮಿತಿಗೆ ಜುಲೈ 15 ರೊಳಗೆ  ತಲುಪಿಸುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಂ.ಪಿ.ಅಣ್ಣೇ ಗೌಡ- 9481218329, ಗೋವಿಂದೇಗೌಡ-9449129904,ಎ.ಡಿ.ಸುರೇಶ್-9448596419 ಇವರನ್ನು ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)