ಉಚಿತ ಆಹಾರ, ನೀರು ಪೂರೈಕೆ

7

ಉಚಿತ ಆಹಾರ, ನೀರು ಪೂರೈಕೆ

Published:
Updated:

ಪೆನುಕೊಂಡ (ಆಂಧ್ರಪ್ರದೇಶ): `ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಬಾರಿ ಸಂಖ್ಯೆಯಲ್ಲಿ ಜನರು ನೆರೆದಿರುವುದು ಕಂಡ ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ತಂಡದ ಸದಸ್ಯರು ಸ್ಥಳದಲ್ಲಿಯೇ ಉಚಿತವಾಗಿ ಆಹಾರ ಮತ್ತು ನೀರು ಕೊಡುತ್ತಿದ್ದರು.ಬಿಸಿಬಿಸಿಯಾದ ಪೊಂಗಲ್ ಮತ್ತು ಪಾಕೆಟ್ ನೀರನ್ನು ಪೊಲೀಸ್ ಸಿಬ್ಬಂದಿ, ರೈಲ್ವೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು, ಸ್ಥಳೀಯರು ಮತ್ತು ಮಾಧ್ಯಮ ಪ್ರತಿನಿಧಿಗಳು ಸವಿದರು.`ಸಮೀಪದಲ್ಲಿ ಎಲ್ಲಿಯೂ ಊಟ ಕೂಡ ಇರಲಿಲ್ಲ. ಅದೇ ಸಮಯದಲ್ಲಿ ಸತ್ಯಸಾಯಿಬಾಬಾ ತಂಡದವರು ಉಚಿತವಾಗಿ ಆಹಾರ ಮತ್ತು ನೀರು ಪೂರೈಸಿ ಸಹಕರಿಸಿದರು~ ಎಂದು ಸ್ಥಳೀಯರೊಬ್ಬರು ತಿಳಿಸಿದರು.ಎಲ್ಲೆಡೆ ಬಿಗಿ ಕಾವಲು ಘಟನಾ ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವುದೇ ರೀತಿಯಲ್ಲಿ ಕದಡಬಾರದು ಎಂಬ ಉದ್ದೇಶದಿಂದ ಇಡೀ ಪೆನುಕೊಂಡದಲ್ಲಿ ಬಿಗಿಭದ್ರತೆ ಕಲ್ಪಿಸಲಾಗಿತ್ತು.ಸ್ಥಳೀಯ ಪೊಲೀಸರು, ರೈಲ್ವೆ ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿ ಪ್ರಮುಖ ಸ್ಥಳಗಳಲ್ಲಿ ಜಮಾಯಿಸಿದ್ದರು. ರೈಲು ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.ಮಾಧ್ಯಮದವರ ನೂಕುನುಗ್ಗಲು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಿಯೂ ಕಾಣಸಿಗದ ಮಾಧ್ಯಮ ಪ್ರತಿನಿಧಿಗಳ ತಂಡಗಳು ಅಲ್ಲಿ ನೆರೆದಿದ್ದವು.ಸುದ್ದಿ ಹರಡುತ್ತಿದ್ದಂತೆಯೇ ತಂಡೋಪತಂಡವಾಗಿ ದೃಶ್ಯ ಮತ್ತು ಮುದ್ರಣ ಮಾಧ್ಯಮದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸತೊಡಗಿದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೇಂದ್ರ ಸಚಿವ ಮುಕುಲ್ ರಾಯ್ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗಲಂತೂ ಅವರನ್ನು ಮಾತನಾಡಿಸಲು ಮುಗಿಬಿದ್ದರು.ಕೇಂದ್ರ ಸಚಿವರು ಮೊದಲು ತಮ್ಮಂದಿಗೆ ಮಾತನಾಡಬೇಕೆಂದು ಹಿಂದಿ, ಇಂಗ್ಲಿಷ್ ಸುದ್ದಿ ವಾಹಿನಿಯವರು ಪಟ್ಟು ಹಿಡಿದರೆ, ಅವರಿಗೆ ಪ್ರತಿಸ್ಪರ್ಧಿಯಾಗಿ ಸ್ಥಳೀಯ ತೆಲುಗು, ಕನ್ನಡ ಸುದ್ದಿವಾಹಿನಿಯವರೂ ಪೈಪೋಟಿ ನೀಡಿದರು.

ರೈಲುಗಳ ಓಡಾಟ ಸ್ಥಗಿತ

ಬೆಂಗಳೂರು: ಹಂಪಿ ಎಕ್ಸ್‌ಪ್ರೆಸ್ ಹಾಗೂ ಸರಕು ಸಾಗಣೆ ರೈಲಿನ ನಡುವೆ ಸಂಭವಿಸಿದ ಅಪಘಾತದ ಕಾರಣ ಮೂರು ರೈಲುಗಳ ಓಡಾಟ ಸ್ಥಗಿತಗೊಂಡು, ಐದು ರೈಲುಗಳ ಓಡಾಟದಲ್ಲಿ ವಿಳಂಬ ಉಂಟಾಗಿತ್ತು.

ಬೆಂಗಳೂರು - ಮೈಸೂರು, ಮೈಸೂರು - ಯಶವಂತಪುರ ಹಾಗೂ ಹಿಂದೂಪುರ - ಗುಂತಕಲ್ ಎಕ್ಸ್‌ಪ್ರೆಸ್ ರೈಲುಗಳ ಓಡಾಟವನ್ನು ಮಂಗಳವಾರ ಸ್ಥಗಿತಗೊಳಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.ಕಾಚಿಗೂಡ - ಬೆಂಗಳೂರು, ನಿಜಾಮುದ್ದೀನ್ - ಬೆಂಗಳೂರು ರಾಜಧಾನಿ, ಮುಂಬೈ - ಬೆಂಗಳೂರು, ಮಚಲಿಪಟ್ಟಣ - ಯಶವಂತಪುರ ಹಾಗೂ ಬಾಗಲಕೋಟೆ - ಯಶವಂತಪುರ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry