ಉಚಿತ ಕರಕುಶಲ ತರಬೇತಿ

7

ಉಚಿತ ಕರಕುಶಲ ತರಬೇತಿ

Published:
Updated:
ಉಚಿತ ಕರಕುಶಲ ತರಬೇತಿ

ಕೆನರಾ ಬ್ಯಾಂಕ್, ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ಕೆತ್ತನೆ ಮತ್ತು ಲೋಹ ಶಿಲ್ಪ ಹಾಗೂ ಕುಂಬ ಕಲೆಯ ತರಬೇತಿಗಳಿಗೆ ಅರ್ಜಿ ಆಹ್ವಾನಿಸಿದೆ. ಕೆತ್ತನೆ ಮತ್ತು ಲೋಹ ಶಿಲ್ಪ ತರಬೇತಿಯ 18 ತಿಂಗಳು ಮತ್ತು ಕುಂಬ ಕಲೆಯ ತರಬೇತಿಯು 6 ತಿಂಗಳ ಅವಧಿಯದ್ದಾಗಿದೆ. ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಉಚಿತ ಊಟ, ವಸತಿ ನೀಡಲಾಗುವುದು. ಅಲ್ಲದೇ, ತರಬೇತಿಗೆ ಅಗತ್ಯವಿರುವ ಸಾಮಗ್ರಿಗಳನ್ನೂ ಸಂಸ್ಥೆಯೇ ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

18 ರಿಂದ 35 ವರ್ಷದ ಒಳಗಿನ, ಕನಿಷ್ಠ 7ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ವಿಳಾಸ: ನಿರ್ದೇಶಕರು, ಕೆನರಾ ಬ್ಯಾಂಕ್‌ ಆಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆ, ಜೋಗರದೊಡ್ಡಿ, ಬಿಡದಿ ಕೈಗಾರಿಕಾ ಪ್ರದೇಶ, ಬಿಡದಿ–562109. ಸಂಪರ್ಕ– 99001 58885 ಅಥವಾ 91649 84414

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry