ಬುಧವಾರ, ನವೆಂಬರ್ 20, 2019
25 °C

ಉಚಿತ ಕರೆಗೆ `ವೈಬರ್'

Published:
Updated:

ನಿಮ್ಮ ದೂರವಾಣಿ ಮಾಸಿಕ ಶುಲ್ಕ ಹೆಚ್ಚುತ್ತಿದೆಯೇ? ಮೊಬೈಲ್ ಕರೆ ದರ ದುಬಾರಿ ಆಗಿದೆಯೇ? ಹಾಗಾದರೆ ಇಲ್ಲೊಂದು ಉಚಿತ ಅಪ್ಲಿಕೇಷನ್ ಇದೆ. `ವೈಬರ್' (Viber) ಎನ್ನುವ ಈ ಅಪ್ಲಿಕೇಷನ್ ಬಳಸಿ, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡಬಹುದು. ಅಷ್ಟೇ ಅಲ್ಲ, ದಿನಕ್ಕೆ ಎಷ್ಟು ಬೇಕಾದರೂ `ಎಸ್‌ಎಂಎಸ್' ಮತ್ತು ಫೋಟೊಗಳನ್ನು ರವಾನಿಸಬಹುದು.ಐಫೋನ್, ಬ್ಲ್ಯಾಕ್‌ಬೆರಿ, ವಿಂಡೋಸ್ ಮತ್ತು ಆಂಡ್ರಾಯ್ಡ  ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ `ವೈಬರ್' ಅಪ್ಲಿಕೇಷನನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.ಗರಿಷ್ಠ ಗುಣಮಟ್ಟದ ಹೈ-ಡೆಫಿನೆಷನ್ ಧ್ವನಿ ಇದರ ಹೆಚ್ಚುಗಾರಿಕೆ. ಆದರೆ, ಕರೆ ಸ್ವೀಕರಿಸುವ ವ್ಯಕ್ತಿಯ ಮೊಬೈಲ್‌ನಲ್ಲೂ ಈ ಅಪ್ಲಿಕೇಷನ್ ಇರಬೇಕಾದ್ದು ಅಗತ್ಯ. `ವೈಬರ್' ಬಳಕೆಗೆ ಮೊಬೈಲ್‌ನಲ್ಲಿ 3ಜಿ ಮತ್ತು ವೈ-ಫೈ ಸೌಲಭ್ಯ ಕೂಡ ಇರಬೇಕು.  ಯೂಸರ್ ನೇಮ್, ಪಾಸ್‌ವರ್ಡ್ ಇತ್ಯಾದಿ ಕಿರಿಕಿರಿ ಇಲ್ಲ.ಕರೆ ಮಾಡಬೇಕಾದವರ ದೂರವಾಣಿ ಸಂಖ್ಯೆ ನೆನಪಿದ್ದರೆ ಸಾಕು. ಸ್ಕೈಪ್, ವಿಂಡೋಸ್ ಲೈವ್ ಮೆಸೆಂಜರ್‌ಗಿಂತ ಭಿನ್ನವಾಗಿರುವ ಈ ಅಪ್ಲಿಕೇಷನ್ ಈಗಾಗಲೇ 17.50 ಕೋಟಿ ಜನರು ಬಳಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)