ಬುಧವಾರ, ನವೆಂಬರ್ 20, 2019
20 °C

ಉಚಿತ ಪಠ್ಯಪುಸ್ತಕ ವಿತರಣೆ

Published:
Updated:

ಶೃಂಗೇರಿ : ಇಲ್ಲಿನ ಜಗದ್ಗುರು ಅಭಿನವ ವಿದ್ಯಾತೀರ್ಥ ಪ್ರೌಡಶಾಲೆಯಲ್ಲಿ ಶುಕ್ರ ವಾರ  ಉಚಿತ ಪಠ್ಯಪುಸ್ತಕ ಸಮವಸ್ತ್ರ ಹಾಗೂ ಬ್ಯಾಗ್‌ಗಳನ್ನು ಪಟ್ಟಣ ಪಂಚಾ ಯಿತಿ ಅಧ್ಯಕ್ಷೆ ಸುಮಾ ಸೋಮಶೇಖರ್ ಹಾಗೂ ಶಿಕ್ಷಣ ಇಲಾಖೆಯ ಕ್ರೀಡಾ ನಿರ್ದೇಶಕ ಬಂಕಾಪುರ ವಿದ್ಯಾರ್ಥಿಗಳಿಗೆ ನೀಡಿದರು.ಇದೇ ಸಂದರ್ಭದಲ್ಲಿ ಶ್ರೀಮಠದ ಗ್ರಾಮದತ್ತಿ ಯೋಜನೆಯಡಿಯಲ್ಲಿ ನೀಡ ಲಾಗುತ್ತಿರುವ ನೋಟ್‌ಬುಕ್, ಪೆನ್, ಪೆನ್ಸಿಲ್, ವಾಟರ್‌ಬಾಟಲ್ ಮತ್ತು ಟಿಫಿನ್ ಬಾಕ್ಸ್‌ಗಳನ್ನು ಮುಖ್ಯ ಶಿಕ್ಷಕ ಎಚ್. ಎಸ್. ವೆಂಕಟೇಶ್  ವಿತರಿಸಿದರು.

 

ದಾನಿಗಳು, ಶಾಲಾ ಪೋಷಕರು ಆದ ಶ್ರೀಮಠದ ಮಲ್ಲಿಕಾರ್ಜುನ ಬೆಟ್ಟದ ಪಾರುಪತ್ತೇದಾರರಾದ ವೆಂಕಟೇಶ್‌ಶರ್ಮ ಅವರು ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದುದಲ್ಲದೇ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕೆ. ಎಸ್. ಶ್ರೀಲಕ್ಷ್ಮಿ ಅವರಿಗೆ ರೂ5000 ಪ್ರೋತ್ಸಾಹಧನ ನೀಡಿದರು.ಶಿಕ್ಷಣ ಇಲಾ ಖೆಯ ಕ್ರೀಡಾ ನಿರ್ದೇಶಕ ಬಂಕಾ ಪುರ ಹಾಗೂ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಚ್. ಎಸ್. ವೆಂಕಟೇಶ್ ಅವರು ವಿದ್ಯಾ ರ್ಥಿಗಳಿಗೆ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತನ್ನಿ ಎಂದು ಹಾರೈ ಸಿದರು ಕಾರ್ಯಕ್ರಮದಲ್ಲಿ ಸರಸ್ವತಿ ಶಂಕರನಾರಾಯಣ್, ಮಾನುಷ, ಕೃತ್ತಿಕ, ರಂಜಿತಾ ವಿ. ಶರ್ಮ ಇದ್ದರು.

ಪ್ರತಿಕ್ರಿಯಿಸಿ (+)