ಶುಕ್ರವಾರ, ಮೇ 7, 2021
25 °C

ಉಚಿತ ವೈನ್ ಸವಿಯುವ ಸದವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಡಿನ ಜನರಿಗೆ ವೈನ್ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ `ಹೆರಿಟೇಜ್ ಗ್ರೇಪ್ ವೈನರಿ~ ಕಂಪೆನಿಯು ಶುಕ್ರವಾರದಿಂದ ಒಂದು ವಾರ ಕಾಲ ಉಚಿತ `ವೈನ್ ಪ್ರವಾಸ~ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಬೆಂಗಳೂರು- ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣ ಬಳಿ ಇರುವ ಕಂಪೆನಿಯ ವೈನ್ ತಯಾರಿಕಾ ಘಟಕಕ್ಕೆ (ವೈನರಿ) ಸಾರ್ವಜನಿಕರು ಭೇಟಿ ನೀಡಿ ವೈನ್ ತಯಾರಿಕೆಯ ಎಲ್ಲ ಹಂತಗಳನ್ನು ಖುದ್ದು ವೀಕ್ಷಿಸುವುದರ ಜತೆಗೆ ಉಚಿತವಾಗಿ ವೈನ್ ಸವಿಯಬಹುದು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್.ವೆಂಕಟರಾಮರೆಡ್ಡಿ, `ಬೇಸಿಗೆ ರಜಾ ದಿನಗಳಲ್ಲಿ ರಾಜ್ಯದ ಜನರಿಗೆ ವೈನ್ ಸಂಸ್ಕೃತಿ ಪರಿಚಯಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ~ ಎಂದರು.ಚನ್ನಪಟ್ಟಣ ತಾಲ್ಲೂಕಿನ ಮಳೂರು ಹೋಬಳಿಯ ಗಂಗೇದೊಡ್ಡಿ ಗ್ರಾಮದಲ್ಲಿ ಹೆರಿಟೇಜ್ ವೈನರಿ ಇದೆ. ವಿವರಗಳಿಗೆ ದೂರವಾಣಿ ಸಂಖ್ಯೆ: 080- 26696010 ಅನ್ನು ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.