ಉಚಿತ ಶಿಕ್ಷಣಕ್ಕೆ ಸ್ವತಂತ್ರ ಸಂಸ್ಥೆ ಅಗತ್ಯ: ದೊರೆಸ್ವಾಮಿ

7

ಉಚಿತ ಶಿಕ್ಷಣಕ್ಕೆ ಸ್ವತಂತ್ರ ಸಂಸ್ಥೆ ಅಗತ್ಯ: ದೊರೆಸ್ವಾಮಿ

Published:
Updated:

ಬೆಂಗಳೂರು:  `ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೆ ತರಬೇಕು, ಇದಕ್ಕಾಗಿ ಸ್ವತಂತ್ರವಾದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು~ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಿಕ್ಷಣ ವ್ಯವಸ್ಥೆಯಲ್ಲಿ ಯಾರದೇ ಹಸ್ತಕ್ಷೇಪ ಇರಬಾರದು. ಸ್ವತಂತ್ರ ಸಂಸ್ಥೆಯಲ್ಲಿರುವ ಸದಸ್ಯರು ಯಾವುದೇ ಪಕ್ಷ, ಅಥವಾ ಯಾವುದೇ ಧೋರಣೆಗೆ ಒಳಪಟ್ಟಿರಬಾರದು. ಅವರು ಸ್ವತಂತ್ರ ಆಲೋಚನೆ ಹೊಂದಿದವರಾಗಿರಬೇಕು~ ಎಂದು ತಿಳಿಸಿದರು.ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವ ಸಂಪಾದಕ ಪ್ರೊ.ಬಿ.ಗಂಗಾಧರಮೂರ್ತಿ ಮಾತನಾಡಿ, `ಸಮಿತಿ ವತಿಯಿಂದ ಹೊರತರುತ್ತಿರುವ ಟೀಚರ್ ಪತ್ರಿಕೆಯ ದಶಮಾನೋತ್ಸವ ಸಮಾರಂಭವನ್ನು ಮೇ 18 ಮತ್ತು 19 ರಂದು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಚರಿಸಲಾಗುವುದು~ ಎಂದು ಹೇಳಿದರು.`ಸಮಾರಂಭದಲ್ಲಿ ಪ್ರಸ್ತುತ ವಿಷಯಗಳಾದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಮಸೂದೆ, ಹೊಸ ಪಿಂಚಣಿ ಯೋಜನೆ, ಇಂದಿನ ಪಠ್ಯಪುಸ್ತಕಗಳು ಇನ್ನು ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗುವುದು~ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಸಂಚಾಲಕಿ ಜಿ.ವಿನುತಾ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry