ಉಜ್ಜನಿ: ನೂತನ ಶ್ರೀ ಸುಪರ್ದಿಗೆ ಮುದ್ರೆಯುಂಗುರ

7

ಉಜ್ಜನಿ: ನೂತನ ಶ್ರೀ ಸುಪರ್ದಿಗೆ ಮುದ್ರೆಯುಂಗುರ

Published:
Updated:
ಉಜ್ಜನಿ: ನೂತನ ಶ್ರೀ ಸುಪರ್ದಿಗೆ ಮುದ್ರೆಯುಂಗುರ

ಕೊಟ್ಟೂರು: ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಮಂಗಳವಾರ ಮಹಾ ದೈವದ ಮತ್ತು ಶಿವಾಚಾರ್ಯರ ಸಮಕ್ಷಮದಲ್ಲಿ ನೂತನ ಜಗದ್ಗುರು ಮಹಾಂತ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗೆ ಲಿಂಗೈಕ್ಯ ಶ್ರೀಗಳ ಬಂಗಾರದ ಕಿರೀಟ, ಮುದ್ರೆಯುಂಗುರ, ಕಡಗ, ಕಮಂಡಲ ಸೇರಿದಂತೆ ಹಲವಾರು ಆಭರಣಗಳನ್ನು ಒಪ್ಪಿಸಲಾಯಿತು.ಇದೇ 2 ರಂದು ಲಿಂಗೈಕ್ಯ ಜಗದ್ಗುರು ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಮತ್ತು 3 ರಂದು ನೂತನ ಶ್ರೀಗಳ ಪಟ್ಟಾಭಿಷೇಕ ಇರುವುದರಿಂದ ಮಹಾದೈವದ ಮತ್ತು ಶಿವಾಚಾರ್ಯರು ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಮಹಾಂತರಾಜೇಂದ್ರ ಶಿವಾಚಾರ್ಯರಿಗೆ ನೀಡಿದರು.ಶ್ರೀಪೀಠದ ಜ್ಞಾನಗುರು ವಿದ್ಯಾಪೀಠದ ಪ್ರಧಾನ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ, ಡೋಣೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಗಣ್ಯರು ಹಾಜರ್ದ್ದಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry