ಬುಧವಾರ, ಮೇ 25, 2022
29 °C

ಉಜ್ಜಯಿನಿ ಪೀಠದ ಶ್ರೀಗಳ ಪಟ್ಟಾಭಿಷೇಕ ನ.3ರಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು: ಉಜ್ಜಯಿನಿ ಪೀಠದ  ಜಗದ್ಗುರು ಮಹಾಂತರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಪಟ್ಟಾಭಿಷೇಕ ಕಾರ್ಯಕ್ರಮ ನವೆಂಬರ್ 3ರಂದು ನಡೆಯುವ ಸಾಧ್ಯತೆ ಇದೆ ಎಂದು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.~ಈಗ ರಾಜಯೋಗವಿದೆ. ಈ ಸಮಯವನ್ನು ಬಿಟ್ಟರೆ ಫೆಬ್ರುವರಿ ತಿಂಗಳಲ್ಲಿ ರಾಜಯೋಗ ಬರಲಿದೆ. ಹಾಗಾಗಿ ನವೆಂಬರ್‌ನಲ್ಲಿಯೇ ಪಟ್ಟಾಭಿಷೇಕ ನಡೆಯುವ ಸಾಧ್ಯತೆ ಇದೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ನವೆಂಬರ್ 2ರಂದು ಲಿಂಗೈಕ್ಯ ಮರುಳಸಿದ್ಧೇಶ್ವರ ಸ್ವಾಮೀಜಿ ಪುಣ್ಯಾರಾಧನೆ ನೆರವೇರಿಸಿದ ಮರುದಿನವೇ ಪಟ್ಟಾಭಿಷೇಕ ನಡೆಸಲು ಸಮಾಲೋಚನೆ ನಡೆಯುತ್ತಿದೆ ಎಂದರು.ಅತಿ ಕಡಿಮೆ ಅವಧಿಯಲ್ಲಿ ಪಟ್ಟಾಭಿಷೇಕ ಮಾಡಲು ಕಷ್ಟವಾಗುತ್ತದೆ ನಿಜ. ಆದರೆ ಈಗ ರಾಜಯೋಗ ಇರುವುದರಿಂದ ಇದು ಸೂಕ್ತ ಸಮಯವಾಗಿದೆ ಎಂದು ಜಗದ್ಗುರುಗಳು ಮತ್ತು ಶಿವಾಚಾರ್ಯರು ಚಿಂತಿಸುತ್ತಿದ್ದಾರೆ. ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದರು.ಮಹಾಂತ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ  ಶ್ರೀಪೀಠದ ಪರಂಪರೆಯಂತೆ ಪೂಜಾ ಕೈಂಕರ್ಯಗಳನ್ನು ಆರಂಭಿಸ್ದ್ದಿದಾರೆ. ಸ್ವಾಮೀಜಿಗಳು ಉಜ್ಜಯಿನಿಯ ಸುತ್ತಮುತ್ತ ಇರುವ 9 ಪಾದ(ಪಾದಗಟ್ಟಿ)ಗಳಲ್ಲಿ ನಾಲ್ಕು ಪಾದಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.