ಉಜ್ಜಿನಿ, ಶ್ರೀಶೈಲ ಶ್ರೀಗಳ ಅಡ್ಡಪಲ್ಲಕ್ಕಿ

7

ಉಜ್ಜಿನಿ, ಶ್ರೀಶೈಲ ಶ್ರೀಗಳ ಅಡ್ಡಪಲ್ಲಕ್ಕಿ

Published:
Updated:

ಇಂಡಿ: ಪಟ್ಟಣದ ಪ್ರತಿಷ್ಠಿತ ಶ್ರೀ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಉಜ್ಜಿನಿ  ಮತ್ತು ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಅತಿ ವಿಜೃಂಭಣೆಯಿಂದ ಜರುಗಿತು.1008 ಜನ ಮುತ್ತೈದೆಯರ ಪೂರ್ಣ ಕುಂಭೋತ್ಸವ, ಪುರವಂತರ ಮತ್ತ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಜರುಗಿತು. ಮೆರವಣಿಗೆಯು ಪಟ್ಟಣದ ಶ್ರೀ ಶಾಂತೇಶ್ವರ ಪಾದಗಟ್ಟೆಯಿಂದ ಹೊರಟು  ಸಿಂದಗಿ ರಸ್ತೆಯಲ್ಲಿರುವ ಶ್ರೀ ಶಾಂತೇಶ್ವರ ಮಂಗಳ ಕರ್ಯಾಲಯಕ್ಕೆ ಬಂದು ತಲುಪಿತು.ಮೆವಣಿಗೆಯುದ್ದಕ್ಕೂ ಸುಮಂಗಲೆಯರು ಕುಂಭೊತ್ಸವ, ಆರತಿ, ಪುರವಂತರ ಸೇವೆ, ಮಹಾದೇಶ್ವರ ಕಲಾ ತಂಡದವರಿಂದ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಸಾಗಿತು. ಮೆವಣಿಗಯೂದ್ದಕ್ಕೂ ಭಕ್ತರು ಸಾಲುಗಟ್ಟಿ ನಿಂತು ಭಕ್ತಿ ಭಾವದೊಂದಿಗೆ ಜಗದ್ಗುರುಗಳ ದರ್ಶನ ಪಡೆದುಕೊಂಡರು.ಮೆರವಣಿಗೆಯಲ್ಲಿ ಶಾಸಕ ಡಾ, ಸಾರ್ವಭೌಮ ಬಗಲಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಶ್ರೆ ಶಾಂತೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಉಪಾಧ್ಯಕ್ಷ ಸದಾಶಿವ ಬಿರಾದಾರ, ಸದಸ್ಯರಾದ ಈರನಗೌಡ ಪಾಟೀಲ, ಅಶೋಕ ಪಾಟೀಲ, ಕಲ್ಲಪ್ಪ ಮಸಳಿ, ಹಣಮಂತ ಹೊಟಗಿ, ಶಿವಪುತ್ರ ಶಿರಕನಹಳ್ಳಿ, ಮಹಾದೇವ ಬಾರೀಕಾಯಿ, ರಮೇಶ ಕಂಬಾರ, ಅನಿಲ ಬಿರಾದಾರ, ಪಟ್ಟಣದ ಹಿರಿಯ ಧುರೀಣ ದಾದಾಗೌಡ ಪಾಟೀಲ, ಪುರಸಭೆಯ ಅಧ್ಯಕ್ಷ ದೇವೇಂದ್ರ ಕುಂಬಾರ, ಉಪಾಧ್ಯಕ್ಷೆ ರೇಣುಕಾ ಐರೋಡಗಿ ಮುಂತಾದವರಲ್ಲದೇ ಪಟ್ಟಣದ ಪ್ರಮುಖರು ಮತ್ತು ಸಾವಿರಾರು ಜನ ದೇವರ ಭಕ್ತರು ಉಪಸ್ಥಿತರ್ದ್ದಿದ್ದರು. ಮೆರವಣಿಗೆಯ ನಂತರ ಧರ್ಮ ಸಭೆ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry