ಭಾನುವಾರ, ಜೂನ್ 13, 2021
26 °C

ಉಜ್ಜೀವನ್ ಸಂಸ್ಥೆಯಿಂದ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವರೆಲ್ಲ ಜೀವನದಲ್ಲಿ ಅವಕಾಶ ವಂಚಿತ ಮಕ್ಕಳು. ಆದರೂ ಅವರ ಕಣ್ಣಿನಲ್ಲಿ ಬಣ್ಣಬಣ್ಣದ ಕನಸು. ನಗರದ ಚಂದ್ರ ಲೇಔಟ್‌ನಲ್ಲಿ ಉಜ್ಜಿವನ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಮಕ್ಕಳು ಕೈಯಲ್ಲಿ ಆಟಿಕೆ ಮತ್ತು ಕಿಟ್‌ಗಳನ್ನು ಹಿಡಿದುಕೊಂಡು ಸಂಭ್ರಮಿಸಿದರು.ಉಜ್ಜಿವನ್ ಸಂಸ್ಥೆಯು ಚಂದ್ರ ಬಡಾವಣೆಯಲ್ಲಿರುವ ಮಾದರಿ ಅಂಗನವಾಡಿಯ ಮಕ್ಕಳಿಗೆ ಶೈಕ್ಷಣಿಕ ಕಿಟ್, ಅಂಗನವಾಡಿಗೆ ವಾಟರ್ ಪ್ಯೂರಿಫೈಯರ್, ಕುಕ್ಕರ್, ವೇಯಿಂಗ್ ಸ್ಕೇಲ್‌ಗಳನ್ನು ನೀಡಲಾಯಿತು.ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಚೌಡಪ್ಪ ಮಾತನಾಡಿ `ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದೇಶದ ಅಭಿವೃದ್ಧಿ ಸಾಧ್ಯ. ಆದರೆ ಸಮಾಜದಲ್ಲಿ ಅವಕಾಶ ವಂಚಿತವಾಗಿರುವ ಈ ಮಕ್ಕಳಿಗೆ ಈ ರೀತಿಯ ವಸ್ತುಗಳನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನವಷ್ಟೆ~ ಎಂದರು.ಬಹುತೇಕ ಅಂಗನವಾಡಿಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಖಾಸಗಿ ಸಂಸ್ಥೆಗಳಲ್ಲಿ ಕಲಿಯಲು ನಿಶ್ಶಕ್ತವಾದ ಮಕ್ಕಳು ಮಾತ್ರ ಅಂಗನವಾಡಿಗಳಿಗೆ ಬರುವುದರಿಂದ ಈ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಇದೊಂದು ಒಂದು ಸಣ್ಣ ಪ್ರಯತ್ನ ಎನ್ನುವ ಅವರು ಈಗಾಗಲೇ ಚೆನ್ನಪಟ್ಟಣ, ಯಲಹಂಕ, ಮತ್ತು ಚಂದ್ರ ಬಡಾವಣೆಯ ಅಂಗನವಾಡಿಗಳಿಗೆ ಉಜ್ಜಿವನ್ ಸಂಸ್ಥೆ ಸಹಾಯ ಮಾಡುತ್ತಿರುವುದನ್ನು ಸ್ಮರಿಸಿದರು.ಉಜ್ಜೀವನ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಪ್ರದೀಪ್, `ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ.ಈ ನಿಟ್ಟಿನಲ್ಲಿ ಸಂಸ್ಥೆಯು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತರುವ ಒಂದು ಸಣ್ಣ ಪ್ರಯತ್ನ~ ಎಂದು ನುಡಿದರು. ಈಗಾಗಲೇ ಬೆಂಗಳೂರಿನಲ್ಲಿ 380 ಮಕ್ಕಳು ಮತ್ತು ರಾಜ್ಯದಾದ್ಯಂತ 1200 ಮಕ್ಕಳು ಇದರ ಪ್ರಯೋಜನ ಪಡೆದಿರುವುದು ಸಂಸ್ಥೆಗೆ ಸಂತಸ ತಂದಿದೆಯಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.