ಉಡುಪಿಗೆ ಸುಸಜ್ಜಿತ ಕ್ರಿಕೆಟ್ ಮೈದಾನ ಶೀಘ್ರ

7

ಉಡುಪಿಗೆ ಸುಸಜ್ಜಿತ ಕ್ರಿಕೆಟ್ ಮೈದಾನ ಶೀಘ್ರ

Published:
Updated:

ಉಡುಪಿ: `ನಗರದ ಬೀಡಿನಗುಡ್ಡೆ  ಡಂಪಿಂಗ್ ಯಾರ್ಡ್‌ನಲ್ಲಿ  ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣವು ಸದ್ಯದಲ್ಲೆೀ ನಿರ್ಮಾಣಗೊಳ್ಳಲಿರುವುದಾಗಿ ಉಡುಪಿ ಶಾಸಕ  ರಘುಪತಿ ಭಟ್  ಇಲ್ಲಿ ತಿಳಿಸಿದರು. ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಾಯಿರಾಧಾ ಅಂತರ ಶಾಲಾ ಹಾರ್ಡ್‌ಬಾಲ್  ಕ್ರಿಕೆಟ್ ಪಂದ್ಯಾಕೂಟದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. `ನಗರಸಭೆಯು ಈಗಾಗಲೇ ರೂ 3.5 ಕೋಟಿ  ಮೊತ್ತವನ್ನು ಯೋಜನೆಗಾಗಿ ತೆಗೆದಿರಿಸಿದೆ. ಕ್ರೀಡಾಂಗಣ ನಿರ್ಮಾಣದ ಕಾಗದ ಪತ್ರಗಳ ಕೆಲಸಗಳು ಮುಗಿದಿದೆ. ಯೋಜನೆ  ಪೂರ್ಣಗೊಂಡ ಬಳಿಕ   ಎಳೆಯ ಕ್ರಿಕೆಟಿಗರಿಗೆ ಹೆಚ್ಚಿನ ಪ್ರಯೋಜನವಾಗಲಿದೆ~ ಎಂದರು.ಶಾಸಕರು ಹಾಗೂ ಡಿವೈಎಸ್‌ಪಿ ಜಯಂತ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ವಾಸು ಶೇರಿಗಾರ್, ಉದಯ ಕುಮಾರ್, ಬಾಲಕೃಷ್ಣ ಪರ್ಕಳ, ಬಾಲಕೃಷ್ಣ ಮುದ್ದೊಡಿ, ಶಶಿಧರ್ ಕಿದಿಯೂರು ಇದ್ದರು. ಪ್ರೌಢಶಾಲಾ ವಿಭಾಗದಲ್ಲಿ ಉಡುಪಿ ಇ ಎಂ. ಎಚ್ ಎಸ್, ಕುಂಜಿಬೆಟ್ಟು ತಂಡವು ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆ ತಂಡವನ್ನು ಸೋಲಿಸಿತು. ಪ್ರಾಥಮಿಕ ವಿಭಾಗದಲ್ಲಿ ಉಡುಪಿ ಸೇಂಟ್ ಮೇರಿ  ಶಾಲಾ ತಂಡ ವಿದ್ಯೋದಯ ಪಬ್ಲಿಕ್ ಶಾಲೆಯನ್ನು ಸೋಲಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry