ಉಡುಪಿಯಿಂದ 210 ಮಂದಿ

7

ಉಡುಪಿಯಿಂದ 210 ಮಂದಿ

Published:
Updated:

ಉಡುಪಿ: ಇದೇ 20ರಂದು ಬೆಂಗಳೂರಿನಲ್ಲಿ ರಾಜ್ಯದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು ಅದರ ಪೂರ್ವ ಸಿದ್ಧತೆಗಾಗಿ ಗುರುವಾರ ಶೃಂಗೇರಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ  ನಡೆಯುವ ಆರು ಜಿಲ್ಲೆಗಳ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಉಡುಪಿಯಿಂದ 210 ಮಂದಿ ಪಾಲ್ಗೊಳ್ಳಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಸಭೆಗೆ ಜಿಲ್ಲಾ ಘಟಕ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಚಿವರು, ಸಂಸದರು, ಶಾಸಕರು, ಶಕ್ತಿಕೇಂದ್ರದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಪ್ರಭಾರಿಗಳು, ಮೋರ್ಚಾಗಳ ಪ್ರಭಾರಿಗಳು, ಪ್ರಕೋಷ್ಠ ಪ್ರಭಾರಿಗಳು ಪ್ರತಿ ಶಕ್ತಿಕೇಂದ್ರದಿಂದ ಒಬ್ಬರು ಮಹಿಳಾ ಪ್ರಮುಖರು ಪಾಲ್ಗೊಳ್ಳುವರು ಎಂದರು.ಉಡುಪಿ ಜಿ.ಪಂ.ಗೆ ಇದೇ 9ರಂದು, ಉಡುಪಿ ತಾ.ಪಂ.ಗೆ 10ರಂದು, ಕುಂದಾಪುರ ತಾ.ಪಂ.ಗೆ 11 ಮತ್ತು ಕಾರ್ಕಳ ತಾ.ಪಂ.ಗೆ 14ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಈ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆ ಸೇರಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದರು.ಜಿಲ್ಲೆಯ ಮೂರು ತಾಲ್ಲೂಕು ಪಂಚಾಯಿತಿ ಹಾಗೂ ಜಿ.ಪಂ.ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಉಡುಪಿ ನಗರಸಭೆ, ಕುಂದಾಪುರ ಪುರಸಭೆ ಹಾಗೂ ಕಾರ್ಕಳ ಪುರಸಭೆಗೆ ಪ್ರಶಸ್ತಿ ದೊರಕಿರುವುದು ಸಂತೋಷ ತಂದಿದೆ ಎಂದರು.ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾ–ಯಿತಿ ಶ್ರೇಣಿಯಲ್ಲಿ ಕ್ರಮವಾಗಿ ಉಡುಪಿ ನಗರಸಭೆ ರೂ.5 ಲಕ್ಷ ನಗದು, ಕುಂದಾಪುರ ರೂ.3ಲಕ್ಷ ಹಾಗೂ ಕಾರ್ಕಳಪುರಸಭೆಗೆ 25 ಸಾವಿರ ನಗದು ಪುರಸ್ಕಾರದೊಂದಿಗೆ ತೃತೀಯ ಪ್ರಶಸ್ತಿ ಪಡೆದಿದೆ. ಅದಕ್ಕಾಗಿ ಈ ಎಲ್ಲ ನಗರಸಭೆ ಮತ್ತು ಪುರಸಭೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲ ಸದಸ್ಯರು, ಸಿಬ್ಬಂದಿ ವರ್ಗದವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದಿಸುವುದಾಗಿ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯ ಕಟಪಾಡಿ ಶಂಕರ ಪೂಜಾರಿ ಹಾಗೂ ಸಲೀಂ ಅಂಬಾಗಿಲು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry