ಉಡುಪಿ-ಅಪರಾಧ ಪ್ರಮಾಣ ಇಳಿಕೆ

7

ಉಡುಪಿ-ಅಪರಾಧ ಪ್ರಮಾಣ ಇಳಿಕೆ

Published:
Updated:
ಉಡುಪಿ-ಅಪರಾಧ ಪ್ರಮಾಣ ಇಳಿಕೆ

ಉಡುಪಿ: `ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಇಳಿಮುಖಗೊಂಡಿದ್ದು, 2010ರಲ್ಲಿ ಒಟ್ಟು 369 ವಿವಿಧ ಪ್ರಕರಣ ದಾಖಲಾದರೆ ಈ ವರ್ಷ 270 ಅಪರಾಧ ಪ್ರಕರಣಗಳು ದಾಖಲಾಗಿವೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್ ರವಿಕುಮಾರ್ ಇಲ್ಲಿ ತಿಳಿಸಿದರು.ಉಡುಪಿ ಜಿಲ್ಲಾ ಜ್ಯುವೆಲರ್ಸ್ ಅಸೋಸಿಯೇಶನ್ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಚಿನ್ನಾಭರಣ ಅಂಗಡಿ ಸುರಕ್ಷತಾ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ಜಿಲ್ಲೆಯಲ್ಲಿ 2010ರಲ್ಲಿ 6 ದರೋಡೆ ಪ್ರಕರಣಗಳು ನಡೆದಿದ್ದು, ಈ ವರ್ಷ ಕೇವಲ ಒಂದು ಪ್ರಕರಣ ನಡೆದಿದೆ. ಕಳೆದ ವರ್ಷ 40 ಸುಲಿಗೆ ಪ್ರಕರಣ ದಾಖಲಾದರೆ ಈ ವರ್ಷ 24 ದಾಖಲಾಗಿದೆ. ಹಗಲು ಮನೆ ದರೋಡೆ 2010 ರಲ್ಲಿ 27 ಪ್ರಕರಣ ನಡೆದರೆ ಈ ವರ್ಷ 38 ದಾಖಲಾಗಿದೆ. ರಾತಿ ವೇಳೆ ಮನೆಕಳವು ಪ್ರಕರಣಗಳು ಕಳೆದ ವರ್ಷ 120 ಹಾಗೂ ಈ ವರ್ಷ 100 ಪ್ರಕರಣ ದಾಖಲಾಗಿದೆ.

 

ಸಾಮಾನ್ಯ ಕಳವು ಕಳೆದ ವರ್ಷ127, ಈ ವರ್ಷ 98 ದಾಖಲಾಗಿದೆ. ಮನೆಕಳವು ಪ್ರಕರಣಗಳು ಕಳೆದ ವರ್ಷ 38 ನಡೆದಿದ್ದು ಈ ವರ್ಷ 20 ದಾಖಲಾಗಿದೆ. ಅಪರಾಧ ಪ್ರಮಾಣ ಇಳಿದಿರುವುದು ಸಮಾಧಾನಕರ ವಿಷಯ.~ ಎಂದರು.`ಕಳೆದ ವರ್ಷ ಕಳವಾದ ಸ್ವತ್ತುಗಳ ಮೌಲ್ಯ ರೂ.2.75 ಕೋಟಿ. ಈ ಪೈಕಿ ರೂ.66.09 ಲಕ್ಷ ಮೌಲ್ಯದ ಸ್ವತ್ತು ಸ್ವಾಧಿನಪಡಿಸಿಕೊಳ್ಳಲಾಗಿದೆ. 2011ರಲ್ಲಿ  ರೂ.2.56 ಕೋಟಿ ಮೌಲ್ಯದ ಸ್ವತ್ತುಗಳು ಕಳವಾಗಿದ್ದು ರೂ.1.93 ಕೋಟಿ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಚಿನ್ನದ ಅಂಗಡಿಗಳಲ್ಲಿ ಕಳವಾದವಾದ ಸ್ವತ್ತುಗಳ ಮೌಲ್ಯ ರೂ.12.5 ಲಕ್ಷ.. ಒಟ್ಟು 42 ಪ್ರಕರಣಗಳನ್ನು ಬೇಧಿಸಲಾಗಿದೆ. ಸರ ಕಳವಿಗೆ ಸಂಬಂಧಿಸಿದ 15 ಪ್ರಕರಣಗಳನ್ನು ಬೇಧಿಸಲಾಗಿದೆ~ ಎಂದರು.ಚಿನ್ನದಂಗಡಿ- ಮುನ್ನೆಚ್ಚರಿಕೆ: ಚಿನ್ನಾಭರಣ ಅಂಗಡಿಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮದ ಬಗ್ಗೆಯೂ ಕೂಡಾ ಅಂಗಡಿ ಮಾಲೀಕರಿಗೆ ಅವರು ಮಾಹಿತಿ ನೀಡಿದರು.`ಪ್ರತಿ ಅಂಗಡಿಯವರು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಸೇಫ್ ಲಾಕರ್‌ಗಳನ್ನು ಬಳಸಬೇಕು. ಅಂಗಡಿಗಳ ಹೊರಗೆ ಕೂಡ ಒಂದು ಕ್ಯಾಮೆರಾ ಅಳವಡಿಸಬೇಕು. ಅಂಗಡಿಗೆ ಸೆಂಟ್ರಲ್ ಲಾಕ್ ವ್ಯವಸ್ಥೆ ಬಳಸಬೇಕು. ಖಾಸಗಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಭೂಗತ ಪಾತಕಿಗಳಿಂದ ಕರೆ ಬಂದಲ್ಲಿ ಆ ದೂರವಾಣಿ ಕರೆಯನ್ನು ನಮೂದಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗೆಯೇ ಎಸ್‌ಟಿಡಿ ಕರೆಗಳನ್ನು ಕೂಡ ನಮೂದಿಸಿಕೊಳ್ಳಬೇಕು~ ಎಂದರು.`ಯಾವುದೇ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಆತನ ಬಗ್ಗೆ ಸಮಗ್ರ ವಿವರಗಳನ್ನು ದಾಖಲಿಸಿಕೊಳ್ಳಬೇಕು. ಸ್ವಯಂ ರಕ್ಷಣೆಗೆ ಆಯುಧ ಬೇಕಿದ್ದಲ್ಲಿ ಆ ಬಗ್ಗೆ ಅನುಮತಿ ಪಡೆದುಕೊಳ್ಳಬೇಕು, ಅಗತ್ಯ ಬಿದ್ದಲ್ಲಿ ರಾತ್ರಿ ಗಸ್ತು ಪಡೆ ನಿಯೋಜಿಸಲಾಗುವುದು~ ಎಂದರು.` ಈ ಹಿಂದೆ  ಉದ್ಯಮಿಗಳಿಗೆ, ಬಿಲ್ಡರ್‌ಗಳಿಗೆ ಭೂಗತ ವ್ಯಕ್ತಿಗಳಿಂದ ಬೆದರಿಕೆಯ ಕರೆಗಳು ಬರುತ್ತಿದ್ದವು. ಆದರೆ ಈಗ ಚಿನ್ನಾಭರಣ ಅಂಗಡಿ ಮಾಲೀಕರಿಗೂ ಭೂಗತ ವ್ಯಕ್ತಿಗಳಿಂದ ಬೆದರಿಕೆ ಬರುತ್ತಿರುವ ಪ್ರಕರಣ ಹಲವು ಕಡೆ ಬೆಳಕಿಗೆ ಬಂದಿದೆ. ಅಂತರರಾಷ್ಟ್ರೀಯ ಕರೆಗಳನ್ನು ಸ್ವೀಕರಿಸದೇ ಇರುವುದುಒಳಿತು. ಬಂದರೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು~ ಎಂದರು.ಬ್ರಹ್ಮಾವರ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ ಮಾತನಾಡಿ, `ತಮ್ಮ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಚಿನ್ನದ ಅಂಗಡಿ ಕಳುವಾಗಿತ್ತು. ಅವುಗಳಲ್ಲಿ ಎರಡು ಪ್ರಕರಣ ಬೇಧಿಸಲಾಗಿದೆ. ಇನ್ನೆರಡು ಪ್ರಕರಣಗಳಲ್ಲಿ ಅಂಗಡಿಗೆ ಸೈರನ್ ಅಳವಡಿಸದೇ ಹಾಗೆಯೇ ನಿರ್ಲಕ್ಷ್ಯ ಮಾಡಿದ್ದರಿಂದ ಕಳವು ನಡೆದಿದೆ.ಈ ಬಗ್ಗೆ ಮಾಲೀಕರಿಗೆ ಹಿಂದೆಯೇ ಇಲಾಖೆಯಿಮದ  ಸೂಚನೆ ನೀಡಲಾಗಿತ್ತು. ಅವರು ಸೂಚನೆಯನ್ನು ನಿರ್ಲಕ್ಷಿಸಿದ್ದರು. ಹೀಗಾಗಿ ಚಿನ್ನದ ಮಾರಾಟಗಾರರು ಪೊಲೀಸರೊಂದಿಗೆ ಭದ್ರತೆ ವಿಚಾರದಲ್ಲಿ ಸಹಕಾರ ನೀಡುವುದು ಅಗತ್ಯ~ ಎಂದರು. ಉಡುಪಿ ಜಿಲ್ಲಾ ಜ್ಯುವೆಲ್ಲರಿ ಅಸೋಸಿಯೇಶನ್ ಅಧ್ಯಕ್ಷ ಜಯ ಆಚಾರ್ಯ ಮಾತನಾಡಿ, `ಉಡುಪಿ ಅಸೋಸಿಯೇಷನ್ ವ್ಯಾಪ್ತಿಯಲ್ಲಿ ಎಲ್ಲರೂ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ಶೇ 97ರಷ್ಟು ಬಂಗಾರದ ಅಂಗಡಿಯವರು ಅನುಮಾನಾಸ್ಪದವಾದ ಚಿನ್ನಾಭರಣಗಳನ್ನು ಖರೀದಿ ಮಾಡುವುದಿಲ್ಲ~ಎಂದರು. ಹೆಚ್ಚುವರಿ ಎಸ್ಪಿ ವೆಂಕಟೇಶಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry