ಉಡುಪಿ: ಆಗಾಗ ಸುರಿದ ಭರ್ಜರಿ ಮಳೆ

ಬುಧವಾರ, ಜೂಲೈ 17, 2019
27 °C

ಉಡುಪಿ: ಆಗಾಗ ಸುರಿದ ಭರ್ಜರಿ ಮಳೆ

Published:
Updated:

ಉಡುಪಿ: ಮತ್ತೆ ಮುಂಗಾರು ಮಳೆ ಸೋಮವಾರ ಮುಂದುವರಿದಿದೆ. ದಿನವಿಡೀ ತುಂತುರು ಮಳೆ, ಆಗಾಗ ಧಾರಾಕಾರ ಮಳೆಯಾಗಿದೆ. ಕೆಲವೊಮ್ಮೆ ಗುಡುಗಿನ ಹಿಮ್ಮೇಳವೂ ಸೇರಿಕೊಂಡಿತ್ತು. ಆದರೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆಯಿಂದಲೂ ಮೋಡಕವಿದ ವಾತಾವರಣವಿದ್ದು ಬಿಸಿಲು ಮೂಡಲು ಅವಕಾಶವೇ ಇರಲಿಲ್ಲ. ಆದರೂ ಕೆಲವೊಮ್ಮೆ ಸೂರ್ಯ ಇಣುಕಿ ಮರೆಯಾಗಿದ್ದ. ಬಿಸಿಲು-ಮಳೆಯ ಜುಗಲ್‌ಬಂದಿಯಲ್ಲಿ ಮಳೆಯ ಅಬ್ಬರವೇ ಹೆಚ್ಚಿತ್ತು.ಕಳೆದ 24 ಗಂಟೆಗಳ ಅವಧಿಯಲ್ಲಿ ಜ್ಲ್ಲಿಲೆಯಾದ್ಯಂತ ಸರಾಸರಿ 39 ಮಿ.ಮೀ. ಮಳೆಯಾಗಿದೆ. ಉಡುಪಿ 34 ಮಿ.ಮೀ., ಕುಂದಾಪುರ 11.2 ಮಿ.ಮೀ. ಮತ್ತು ಕಾರ್ಕಳದಲ್ಲಿ 72.8 ಮಿ.ಮೀ. ಮಳೆ ದಾಖಲಾಗಿದೆ.ಪಾಕೃತಿಕ ವಿಕೋಪ ಸಹಾಯವಾಣಿ:ಪ್ರಾಕೃತಿಕ ವಿಕೋಪ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿ: 0820-2531602, ಉಡುಪಿ ತಾಲ್ಲೂಕು ಕಚೇರಿ-252 0417, ಕುಂದಾಪುರ ತಾಲ್ಲೂಕು ಕಚೇರಿ -08254 230 357, ಕಾರ್ಕಳ ತಾಲ್ಲೂಕು ಕಚೇರಿ-08258 230 201, ಉಡುಪಿ ನಗರಸಭೆ- 2520 306/259 3364.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry