ಮಂಗಳವಾರ, ಅಕ್ಟೋಬರ್ 15, 2019
29 °C

ಉಡುಪಿ ಪುರಸಭೆ ವ್ಯಾಪ್ತಿ ವಿವಿಧ ಸ್ಪರ್ಧೆ ವಿಜೇತರು

Published:
Updated:

ಉಡುಪಿ: ಜಿಲ್ಲೆಯ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಬರುವ ಶಾಲಾ/ಕಾಲೇಜುಗಳ ವಿದ್ಯಾಥಿಗಳಿಗೆ ಘನತ್ಯಾಜ್ಯ ವಸ್ತು ನಿರ್ವಹಣೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ  ಇತ್ತೀಚೆಗೆ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ. ಡಿ. 1ರಂದು ನಡೆದ ಪ್ರಾಥಮಿಕ ಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆಯ ವಿಜೇತರು: ಪ್ರಥಮ ಸ್ಥಾನ  ಇಸ್ಮಾಯಿಲ್ 6ನೇ ತರಗತಿ ಬ್ಯಾರೀಸ್ ಸೀ ಸೈಡ್ ಹಿ.ಪ್ರಾ.ಶಾಲೆ ಕೋಡಿ ಕುಂದಾಪುರ ಹಾಗೂ ಗೌತಮ್ ಕೆ.ಎಸ್. 7ನೇ ತರಗತಿ ಸೈಂಟ್ ಮೇರಿಸ್ ಹಿ.ಪ್ರಾ.ಶಾಲೆ ಕುಂದಾಪುರ. ದ್ವಿತೀಯ ಸ್ಥಾನ ಆದಿತ್ಯ 7ನೇ ತರಗತಿ ಉ.ಜಿ.ಪಂ.ಮಾ.ಹಿ.ಪ್ರಾ.ಶಾಲೆ ಖಾರ್ವಿಕೇರಿ ಹಾಗೂ ರಕ್ಷಿತ್ ನಾಯ್ಕ 7ನೇ ತರಗತಿ ಸ.ಹಿ.ಪ್ರಾ.ಶಾಲೆ ವಡೇರಹೋಬಳಿ ಕುಂದಾಪುರ.  ತೃತೀಯ ಸ್ಥಾನ ಶೇಖ್ ಅಫ್ತಾಬ್ 7ನೇ ತರಗತಿ  ವೆಂಕಟ್ರಮಣ ಇಂಗ್ಲೀಷ್ ಮೀಡಿಯಂ ಹಿ.ಪ್ರಾ.ಶಾಲೆ ಕುಂದಾಪುರ.ಡಿ .2ರಂದು ನಡೆದ ಪ್ರೌಢ ಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯ ವಿಜೇತರು: ಪ್ರಥಮ ಸ್ಥಾನ ಮಮತಾ ಎನ್. 9ನೇ ತರಗತಿ ಮಧುಸೂದನ ಕುಶೆ ಪ್ರೌಢಶಾಲೆ ವಡೇರಹೋಬಳಿ ಕುಂದಾಪುರ, ದ್ವಿತೀಯ ಸ್ಥಾನ  ವಿದ್ಯಾ ಬೆಳಕೇರಿ 10ನೇ ತರಗತಿ ಸಂತ ಜೋಸೆಫ್ ಪ್ರೌಢಶಾಲೆ ಚರ್ಚ್‌ರಸ್ತೆ ಕುಂದಾಪುರ, ತೃತೀಯ ಸ್ಥಾನ  ನಿತ್ಯಶ್ರೀ ಕೆ.ವಿ. 10ನೇ ತರಗತಿ ವಿ.ಕೆ.ಆರ್ ಆಚಾರ್ಯ ಇಂಗ್ಲೀಷ್ ಪ್ರೌಢಶಾಲೆ ಕುಂದಾಪುರ. ಡಿ. 3 ರಂದು ನಡೆದ ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯ ವಿಜೇತರು : ಪ್ರಥಮ ಸ್ಥಾನ ಪವಿತ್ರ ದ್ವಿತೀಯ ಪಿ.ಯು.ಸಿ. ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರ , ದ್ವಿತೀಯ ಸ್ಥಾನ ನಿತೀಶ್ ಮಯ್ಯ ಪಿ.ಯು.ಸಿ. ವೆಂಕಟ್ರಮಣ ಪದವಿಪೂರ್ವ ಕಾಲೇಜು ಕುಂದಾಪುರ, ತೃತೀಯ ಸ್ಥಾನ ಪವಿತ್ರಾ ದ್ವಿತೀಯ ಪಿ.ಯು.ಸಿ. ಆರ್.ಎನ್ ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರ.ಈ ಎಲ್ಲ ವಿಜೇತರಿಗೆ ಬಹುಮಾನ ಇದೇ 6 ರಂದು ಕುಂದಾಪುರ ಪುರಸಭಾ ಸಭಾಂಗಣದಲ್ಲಿ ಜರುಗುವ ಬಹುಮಾನ ವಿತರಣಾ ಸಮಾರಂಭದಂದು ವಿತರಿಸಲಾಗುವುದು ಎಂದು  ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)