ಉಡುಪಿ ಭಾರತದ 2ನೇ ಮೀನಮಾತ

7

ಉಡುಪಿ ಭಾರತದ 2ನೇ ಮೀನಮಾತ

Published:
Updated:

ಪಡುಬಿದ್ರಿ: ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ತೀವ್ರ ಹಾನಿಯಾಗಿದ್ದು, ಉಡುಪಿ ಭಾರತದ ಎರಡನೇ `ಮೀನಮಾತ~ ಆಗಲಿದೆ ಎಂದು ಜನಜಾಗೃತಿ ಸಮಿತಿಯ ಗೌರವಾಧ್ಯಕ್ಷ ದುಬೈ ಬಾಲಕೃಷ್ಣ ಶೆಟ್ಟಿ ಎಚ್ಚರಿಸಿದ್ದಾರೆ.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಸಿಎಲ್ ಇರುವ ಪ್ರದೇಶವು ಯೋಜನೆಗೆ ಸೂಕ್ತ ಸ್ಥಳವಲ್ಲ. ಈ ಬಗ್ಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಶಕ್ತಿಯನ್ನು ಅಧ್ಯಯನ ನಡೆಸದೆ ಪರಿಸರ ತಜ್ಞರ ವರದಿಯನ್ನು ಧಿಕ್ಕರಿಸಿ ಯೋಜನೆಯನ್ನು ನಿರ್ಮಿಸಲಾಗಿದೆ. ಈಗಾಗಲೇ ಯೋಜನೆಯಿಂದ ಹಲವು ರೀತಿಯಲ್ಲಿ ಹಾನಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.ಭಾರತದಲ್ಲಿ ಸಿಂಗ್ರೌಲಿ:  ಜಪಾನ್‌ನಂತೆ ಭಾರತದಲ್ಲಿ ಛತ್ತೀಸ್‌ಗಡದ ಸಿಂಗ್ರೌಲಿಯಲ್ಲಿ ಹಾನಿಯಾಗಿದೆ. ಇಲ್ಲಿ 13 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಇದರಿಂದ ಇಲ್ಲಿನ ಪರಿಸರಕ್ಕೆ ಹಾನಿಯಾಗಿದೆ. ಅಲ್ಲಿನ ಜನರು ರೋಗರುಜಿನಗಳಿಗೆ ತುತ್ತಾಗಿದ್ದಾರೆ.ಪ್ರಾಣಿ, ಪಕ್ಷಿಗಳಿಗೂ ವಿಚಿತ್ರ ಕಾಯಿಲೆ ಇದೆ ಎಂದ ಅವರು, ಸಿಂಗ್ರೌಲಿ ಗ್ರಾಮವು ಭಾರತದ ಪ್ರಥಮ ಮೀನಮಾತವಾಗಿ ಗುರುತಿಸಿಕೊಂಡಿದೆ ಎಂದರು.ಉಡುಪಿ 2ನೇ ಮೀನಮಾತ: ಯುಪಿಸಿಎಲ್ ಸ್ಥಾವರದಿಂದ ಉಡುಪಿಯ ಎಲ್ಲೂರು ಗ್ರಾಮವು ದೇಶದ ಎರಡನೇ ಮೀನಮಾತವಾಗಲಿದೆ ಎಂದ ಅವರು, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹಾಗೆ ಅನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ಅಮೆರಿಕದ ವಿಜ್ಞಾನಿಗಳು ಮಾಡಿದ ಸಂಶೋಧನೆಯಲ್ಲಿ ಅಣುವಿದ್ಯುತ್ ಸ್ಥಾವರಗಳಿಗಿಂತ ಉಷ್ಣವಿದ್ಯುತ್ ಸ್ಥಾವರಗಳು ಅಪಾಯಕಾರಿಯಾಗಿದೆ ಎಂದವರು ಹೇಳಿದರು.ಜಯಖಚಿತ: ನಂದಿಕೂರು ಜನಜಾಗೃತಿ ವೇದಿಕೆ ಯುಪಿಸಿಎಲ್ ವಿರುದ್ಧ ಹಲವಾರು ವ್ಯಾಜ್ಯಗಳನ್ನು ಹೂಡಲಾಗಿದ್ದು, ಕೆಲವೊಂದು ಸಂಸ್ಥೆಗಳಿಂದ ಹಿನ್ನಡೆ ಉಂಟಾಗಿದೆ. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶದನ್ವಯ ಸಮಿತಿಯ ಎಲ್ಲಾ ದಾವೆಗಳು ರಾಷ್ಟ್ರೀಯ ಹಸಿರು ಪೀಠಕ್ಕೆ ವರ್ಗಾವಣೆಯಾಗಿದೆ. ನಮ್ಮ ದಾಖಲೆಗಳಿಂದ ಹೊರಾಟದಲ್ಲಿ ಜಯಗಳಿಸುವುದು ಖಚಿತ ಎಂದು ಬಾಲಕೃಷ್ಣ ಶೆಟ್ಟಿ ಹೇಳಿದರು.ವಿರೋಧ: ಯುಪಿಸಿಎಲ್‌ನ 2 ಘಟಕಗಳು ಕಾರ್ಯಾಚರಿಸುತ್ತಿದ್ದು, 3ಮತ್ತು4ನೇ ಘಟಕ ವಿಸ್ತರಣೆಗೆ 450ಎಕರೆ ಭೂ ಸ್ವಾಧೀನಕ್ಕೆ ರಾಜ್ಯ ಸರಕಾರ ಅನುಮತಿ ನೀಡಿರುವುದು ಸರಿಯಲ್ಲ. ಯುಪಿಸಿಎಲ್ ಈತನಕ ಉತ್ಪಾದಿಸಿದ 1200 ಮೆ.ವಾ. ವಿದ್ಯುತ್‌ನಲ್ಲಿ ಶೇ. 8 ಮಾತ್ರ ಜಿಲ್ಲೆಗೆ ನೀಡುತ್ತಿದೆ. 3ಮತ್ತು 4ನೇ ಘಟಕ ಸ್ಥಾಪನೆ ಆದಲ್ಲಿ ಶೇ.75ರಷ್ಟು ಹೊರರಾಜ್ಯಕ್ಕೆ ಹರಿಯಲಿದೆ ಎಂದು ಶೆಟ್ಟಿ ಹೇಳಿದರುಸಾಲದಲ್ಲಿ ಲ್ಯಾಂಕೋ ಕಂಪೆನಿ: ಲ್ಯಾಂಕೋ ಕಂಪೆನಿಯು ಈಗಾಗಲೇ 23ಸಾವಿರ ಕೋಟಿ ಸಾಲದಿಂದ ಬಳಲುತ್ತಿದ್ದು, ತನ್ನ ಎಲ್ಲಾ ಯೋಜನೆಗಳನ್ನು ಮಾರಾಟಕ್ಕಿಟ್ಟಿದೆ.ಯುಪಿಸಿಎಲ್ ಯೋಜನೆಯನ್ನು ಕಂಪನಿಯು ಮಾರಾಟ ಮಾಡಲು ಯತ್ನಿಸುತ್ತಿದೆ. ಈಗಾಗಲೇ ಜಿಂದಾಲ್ ಕಂಪೆನಿ ಸ್ಥಾವರಕ್ಕೆ ಭೇಟಿ ನೀಡಿ ವೀಕ್ಷಿಸಿದೆ  ಎಂದವರು ಹೇಳಿದರು.ರಾಜಸ್ಥಾನದಲ್ಲಿ ಸೋಲಾರ್ ಹಗರಣ, ಆಂಧ್ರದಲ್ಲಿ ವಿಮಾ ಹಗರಣದಲ್ಲಿ ಸಿಲುಕಿಕೊಂಡಿರುವ ಲ್ಯಾಂಕೋ ಕಂಪೆನಿಯು ಯುಪಿಸಿಎಲ್‌ನಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಲು ಕೇಂದ್ರ ಸರ್ಕಾರ ಆದೇಶಿಸಿದ 5ಕೋಟಿ ರುಪಾಯಿಯನ್ನೂ ಸಾರ್ವಜನಿಕರಿಂದ ವಸೂಲು ಮಾಡಲು ನಿರ್ಧರಿಸಿದೆ.ಅಲ್ಲದೆ ಸ್ಟ್ಯಾಂಪ್ ಡ್ಯೂಟಿ, ಸ್ಥಳಿಯ ತೆರಿಗೆಯ 8 ಕೋಟಿ ರೂಪಾಯಿಯನ್ನೂ ಸರ್ಕಾರದಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ಶೆಟ್ಟಿ ಅರೋಪಿಸಿದ್ದಾರೆ. ಸಮಿತಿಯ ಜಯಂತ್ ಭಟ್, ಹರೀಶ್ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry