ಭಾನುವಾರ, ಜನವರಿ 26, 2020
23 °C

ಉಡುಪಿ: ಯುಎಫ್‌ಸಿ ಮಕ್ಕಳ ಹಬ್ಬ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉದ್ಯಾವರ ಫ್ರೆಂಡ್ಸ್ ಸರ್ಕಲ್‌ ಮಕ್ಕಳ ದಿನಾಚರಣೆ ಅಂಗವಾಗಿ ವಿಠೋಬ ರುಖುಮಾಯಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ  ‘ಯುಎಫ್‌ಸಿ ಮಕ್ಕಳ ಹಬ್ಬ’ ಜಿಲ್ಲಾ ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಮೂಹ ನೃತ್ಯ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಕಾರ್ಕಳ ಹೊಸ್ಮಾರಿನ ಬಲ್ಯೊಟ್ಟು ಗುರುಕೃಪಾ ಸೆಂಟ್ರಲ್‌ ಶಾಲೆ ದ್ವಿತೀಯ, ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು.ಪ್ರೌಢಶಾಲಾ ವಿಭಾಗದಲ್ಲಿ ಕಾರ್ಕಳ ಹೊಸ್ಮಾರಿನ ಬಲ್ಯೊಟ್ಟು ಗುರುಕೃಪಾ ಸೆಂಟ್ರಲ್ ಶಾಲೆ ಪ್ರಥಮ, ಪಾಂಗಾಳ ವಿದ್ಯಾವರ್ಧಕ ಪ್ರೌಢಶಾಲೆ ದ್ವಿತೀಯ, ಪಡುಬೆಳ್ಳೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆಯಿತು.ಭರತನಾಟ್ಯ ಕಲಾವಿದರಾದ ಮಂಗಳೂರು ಸಿದ್ದಕಟ್ಟೆಯ ಮಲ್ಲಿಕಾ ವಿ. ಶೆಟ್ಟಿ, ಕಡಿಯಾಳಿಯ ಅಕ್ಷತಾ ಜೆ. ಆಚಾರ್ಯ, ಗಣೇಶ್ ಬ್ರಹ್ಮಾವರ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಮೃತ್ ಶೆಣೈ, ಉಡುಪಿ ನಗರಸಭಾ ಅಧ್ಯಕ್ಷ ಪಿ. ಯುವರಾಜ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಗಿರೀಶ್‌ ಕುಮಾರ್, ಸಂಸ್ಥೆಯ ಅಧ್ಯಕ್ಷ ಅಬೀದ್ ಆಲಿ, ನಿರ್ದೇಶಕ ಶರತ್‌ ಕುಮಾರ್, ಚಂದ್ರಾವತಿ ಎಸ್‌.ಭಂಡಾರಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಚಾಲಕ ರಿಯಾಜ್ ಪಳ್ಳಿ ಸ್ವಾಗತಿಸಿದರು, ನಿರ್ದೇಶಕ ಉದ್ಯಾವರ ನಾಗೇಶ್‌ ಕುಮಾರ್ ಸ್ಪರ್ಧಾ ವಿಜೇತರ ಪಟ್ಟಿ ಓದಿದರು. ಪ್ರಧಾನ ಕಾರ್ಯದರ್ಶಿ ರಮೇಶ್‌ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಶೇಖರ ಕೆ. ಕೋಟ್ಯಾನ್‌ ವಂದಿಸಿದರು.

ಪ್ರತಿಕ್ರಿಯಿಸಿ (+)