ಭಾನುವಾರ, ಮೇ 22, 2022
22 °C

ಉಡುಪಿ ರಾಜಾಂಗಣ: ಗೋವಿಂದ ವೈಭವ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಸೋದೆ ವಾದಿರಾಜ ಮಠ ಹಾಗೂ ಗೋವಿಂಧ ವೈಭವ ಸಮಿತಿ ಆಶ್ರಯದಲ್ಲಿ ಇದೇ 18ರಿಂದ ಗೋವಿಂದ ವೈಭವ ಕಾರ್ಯಕ್ರಮ ಮಠದ ರಾಜಾಂಗಣದಲ್ಲಿ ನಡೆಯಲಿದೆ.ತೆಂಕುತಿಟ್ಟು ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ಟ ಅವರ ಕಲಾಪ್ರದರ್ಶನ, ಜೀವನ ದರ್ಶನ, ಸಾಧನೆಗಳ ಅವಲೋಕನ, ದಾಖಲೀಕರಣ, ಸನ್ಮಾನ ಕಾರ್ಯಕ್ರಮ ಹಾಗೂ ಪ್ರತಿನಿತ್ಯ ಗೋವಿಂದ ವೈಭವ ಪುರಸ್ಕಾರ ಹಾಗೂ ಯಕ್ಷಗಾನ ಬಯಲಾಟ     ನಡೆಯಲಿದೆ.ಯಕ್ಷಗಾನ ಬಯಲಾಟದ ವಿವರ ಈ ಕೆಳಕಂಡಂತಿದೆ. ಎಲ್ಲ ಪ್ರಸಂಗಗಳೂ ಸಂಜೆ ಏಳು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ವರೆಗೆ ನಡೆಯಲಿದೆ. ಇದೇ 24ರಂದು ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗಿನ ಜಾವದ ವರೆಗೆ ಕುರುಕ್ಷೇತ್ರ ಪ್ರಸಂಗ ನಡೆಯಲಿದೆ.

 

    ಗೋವಿಂದ ವೈಭವ ಪುರಸ್ಕಾರ                  ಯಕ್ಷಗಾನ ಪ್ರಸಂಗ                  ಗೋವಿಂದ ಭಟ್ಟರ ಪಾತ್ರ

ಜೂ18:  ಅರಾಟೆ ಮಂಜುನಾಥ                       ಮಹಾಕಲಿ ಮಗಧೇಂದ್ರ             ಮಾಗಧ

ಜೂ.19: ಮಂಡ್ಕೂರು ಜಯರಾಮ್ ಶೆಟ್ಟಿ            ಇಂದ್ರನಂದನ ವಾನರೇಂದ್ರ        ವಾಲಿ

     20: ದಯಾನಂದ ನಾಗೂರು                      ಜಲಂಧರ ಜನನ                     ದೇವೇಂದ್ರ

     21: ದಾಸನಡ್ಕ ರಾಮ ಕುಲಾಲ್                  ಹಿಂಡಿಂಬಾ ವಿವಾಹ                 ಹಿಡಿಂಬಾ (ಹೆಣ್ಣುಬಣ್ಣ)

     22: ಪುಂಡಿಕಾಯಿ ಕೃಷ್ಣ ಭಟ್                      ಜಾಂಬವತಿ ಕಲ್ಯಾಣ                 ಜಾಂಬವಂತ

     23: ಬಜಾಲ್ ಜನಾರ್ದನ                          ದಮಯಂತಿ ಪುನರ್ ಸ್ವಯಂವರ   ಋತುಪರ್ಣ

     24: ಪುತ್ತೂರು ಶ್ರೀಧರ್ ಭಂಡಾರಿ                 ದ್ರೋಣಪರ್ವ ಕರ್ಣಪರ್ವ            ಗದಾ ಪರ್ವ  ಕೌರವ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.