ಉಡುಪಿ ಲೋಕಸಭೆ: ಮಾ.18ಕ್ಕೆ ಚುನಾವಣೆ

7

ಉಡುಪಿ ಲೋಕಸಭೆ: ಮಾ.18ಕ್ಕೆ ಚುನಾವಣೆ

Published:
Updated:

ನವದೆಹಲಿ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ರಾಜೀನಾಮೆಯಿಂದ ತೆರವಾದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಗುರುವಾರ ರಾತ್ರಿ ಘೋಷಣೆಯಾಗಿದ್ದು, ವೇಳಾಪಟ್ಟಿ ಪ್ರಕಟಿಸಲಾಗಿದೆ.ಈ ತಿಂಗಳ 22ರಂದು ಬುಧವಾರ ಅಧಿಸೂಚನೆ ಹೊರಡುವುದರೊಂದಿಗೆ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ನಾಮಪತ್ರಗಳ ಸಲ್ಲಿಕೆಗೆ 29ರಂದು ಬುಧವಾರ ಕೊನೆ ದಿನ. ಮಾರ್ಚ್ 1ರಂದು ಗುರುವಾರ ನಾಮಪತ್ರಗಳ ಪರಿಶೀಲನೆಯಾಗಲಿದ್ದು, 3ರಂದು ಶನಿವಾರ ನಾಮಪತ್ರಗಳನ್ನು ಹಿಂದೆ ಪಡೆಯಲು ಕಡೇ ದಿನ.18ರಂದು ಭಾನುವಾರ ಬೆಳಿಗ್ಗೆ 8ರಿಂದ ಸಂಜೆ  5ಗಂಟೆವರೆಗೆ ಮತದಾನ ನಡೆಯಲಿದೆ. 21ರಂದು  ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry