ಉತ್ತಮ ಅಭ್ಯಾಸ ರೂಢಿಸಿಕೊಳ್ಳಲು ಸಲಹೆ

7

ಉತ್ತಮ ಅಭ್ಯಾಸ ರೂಢಿಸಿಕೊಳ್ಳಲು ಸಲಹೆ

Published:
Updated:

ಹೊಸಪೇಟೆ: ಜೀವನ ಅತ್ಯಂತ ಮಹತ್ತರ ಘಟ್ಟದಲ್ಲಿರುವ ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಉತ್ತಮ ಅಭ್ಯಾಸಗಳೊಂದಿಗೆ ಜೀವನ ರೂಪಿಸಿ ಕೊಳ್ಳಲು ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಲಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ ಹೇಳಿದರು.ಕಮಲಾಪುರದ ನೃಪತುಂಗ ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.“ಪಠ್ಯ ಕಲಿಕೆ ಕೇವಲ ಒಂದು ಮಾರ್ಗ ವಾಗಿದ್ದು ಈ ಮಾರ್ಗದಲ್ಲಿ ನಮ್ಮದೇ ಆದ ಆಲೋಚನೆಯೊಂದಿಗೆ ಭವಿಷ್ಯ ರೂಪಿಸಿಕೊಳ್ಳ ಬೇಕಾಗಿದೆ.  ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ವಿದ್ಯಾರ್ಥಿ ಗಳಿಗೆ ಸೇವೆ, ಆರೋಗ್ಯ, ಜವಾಬ್ದಾರಿ ಮತ್ತು ತಮ್ಮ ಹೊಣೆಗಾರಿಕೆಯನ್ನು ಪ್ರಾಯೋಗಿಕವಾಗಿ ಕಲಿಯಲು ಸಹಕಾರಿ ಯಾಗುತ್ತದೆ ಅಲ್ಲದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಈ ತುಡಿತ ತಮ್ಮ ಉತ್ತಮ ಭವಿಷ್ಯಕ್ಕೆ ನಾಂದಿಯಾಗಲಿದೆ” ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅಬ್ದುಲ್ ರಶೀದ್ ಮಾತನಾಡಿ ಜೀವನ ಪೂರ್ತಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು  ಇತರರು ನಿಮ್ಮನ್ನು ಅನುಕರಣೆ ಮಾಡು ವಂತೆ ಬೆಳೆಯ ಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಉಪಪ್ರಾಚಾರ್ಯ ಸೂರ್ಯಕುಮಾರಿ, ಮುಖ್ಯ ಶಿಕ್ಷಕ ಅನಂತರಾವ್, ಪತ್ರಕರ್ತ ಅನಂತ ಜೋಶಿ ಶಿಬಿರಾಧಿಕಾರಿ ಶಿವಕುಮಾರ ಮಠದ ಹಾಜರಿದ್ದರು.

ಶಿಬಿರದಲ್ಲಿ ಉತ್ತಮ ಸಾಧನೆ ಮಾಡಿದ ತಂಡ ಹಾಗೂ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. 

ಶಿಬಿರಾರ್ಥಿಗಳು ದಿನಗಳ ತಮ್ಮ  ಏಳು ದಿನಗಳ ಅನುಭವಗಳನ್ನು ಸಮಾರಂಭದಲ್ಲಿ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry