ಭಾನುವಾರ, ಮೇ 16, 2021
23 °C

ಉತ್ತಮ ಆಟದ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಿಲ್ ಕುಂಬ್ಳೆ ಬಳಿಕ ಆರ್‌ಸಿಬಿಯ ನಾಯಕತ್ವ ವಹಿಸಿಕೊಂಡಿರುವ ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ ಕಳೆದ ಸಲ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಆದ್ದರಿಂದ ಈ ಬಾರಿ ಇನ್ನಷ್ಟು ಹುಮ್ಮಸ್ಸಿನೊಂದಿಗೆ ತಂಡ ಮುನ್ನಡೆಸಲು ಅವರು ಸಜ್ಜಾಗಿದ್ದಾರೆ.ರಾಯಲ್ ಚಾಲೆಂಜರ್ಸ್ ತಂಡದಿಂದ ಶ್ರೇಷ್ಠ ಪ್ರದರ್ಶನ ನಿರೀಕ್ಷಿಸಬಹುದು ಎಂಬ ಭರವಸೆಯನ್ನು ವೆಟೋರಿ ನೀಡಿದ್ದಾರೆ. `ಎಲ್ಲ ಆಟಗಾರರೂ ಉತ್ಸಾಹದಲ್ಲಿದ್ದು, ಮೊದಲ ಪಂದ್ಯವನ್ನು ಎದುರು ನೋಡುತ್ತಿದ್ದಾರೆ~ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನುಡಿದರು.`ಕಳೆದ ವರ್ಷದ ಟೂರ್ನಿ ಹಾಗೂ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಇದರಿಂದ ನಿರೀಕ್ಷೆಯೂ ಹೆಚ್ಚಿದೆ. ಅದಕ್ಕೆ ತಕ್ಕಂತಹ ಆಟ ಪ್ರದರ್ಶಿಸುವೆವು~ ಎಂದು ತಂಡದ ಸ್ಪಿನ್ ವಿಭಾಗದ ಚುಕ್ಕಾಣಿ ಹಿಡಿಯಲಿರುವ ಕಿವೀಸ್ ಆಟಗಾರ ತಿಳಿಸಿದರು.`ಕಳೆದ ವರ್ಷಕ್ಕೆ ಹೋಲಿಸಿ ನೋಡಿದರೆ, ಈ ಬಾರಿ ತಂಡದ ಬಲ ಇನ್ನಷ್ಟು ಹೆಚ್ಚಿದೆ ಎನ್ನಬಹುದು. ಆರ್. ವಿನಯ್ ಕುಮಾರ್ ಮತ್ತು ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ ತಂಡ ಸೇರಿಸಿಕೊಂಡಿದ್ದಾರೆ. ಯುವ ಆಟಗಾರ ಹರ್ಷಲ್ ಪಟೇಲ್ ನೆಟ್ಸ್‌ನಲ್ಲಿ ನೀಡುತ್ತಿರುವ ಪ್ರದರ್ಶನದಿಂದ ನಾನು ಪ್ರಭಾವಿತಗೊಂಡಿದ್ದೇನೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.