ಉತ್ತಮ ನಡವಳಿಕೆ ಕಲಿಸಿ

7

ಉತ್ತಮ ನಡವಳಿಕೆ ಕಲಿಸಿ

Published:
Updated:

`ಮಂಗಳಮುಖಿ~ಯವರಿಗೆ ಬದುಕುವ ಅವಕಾಶ ಕೊಡಬೇಕು ಎಂಬ ಸಹಾನುಭೂತಿಪರ ಮಾತುಗಳು ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತವೆ. ಆದರೆ ಅವರು ಸಾರ್ವಜನಿಕರ ಜೊತೆ ಹೇಗೆ ವರ್ತಿಸುತ್ತಾರೆ ಎಂಬ ಬಗ್ಗೆ ನನ್ನ ಅನುಭವ ಹೀಗಿದೆ.ನನ್ನ ಸಂಬಂಧಿಯೊಬ್ಬರು ಅಂಗಡಿ `ಪ್ರವೇಶ~ ಸಂದರ್ಭದಲ್ಲಿ ಕೆಲವು ಮಂಗಳ ಮುಖಿಯರು ಬಂದು ಹಣ ಕೊಡುವಂತೆ ಕೇಳಿದರು. 100 ರೂ. ಕೊಟ್ಟರೆ ನಿರಾಕರಿಸಿ 1000 ರೂ ಕೊಡುವಂತೆ ಬೇಡಿಕೆ ಇಟ್ಟರು. ನಾವುಗಳು ನಿರಾಕರಿಸಿದಾಗ ಅವಾಚ್ಯ ಶಬ್ದಗಳನ್ನು ಬಳಸಿದರು. ಸಂಬಂಧಿಗಳ ಮುಂದೆ ತಕರಾರು ಬೇಡವೆಂದು ಹಣ ಕೊಟ್ಟು ಅವರನ್ನು ಸಾಗ ಹಾಕಿದೆವು.ಮಂಗಳ ಮುಖಿಯರಿಗೆ ತಿಳುವಳಿಕೆ ನೀಡಿ ಹಟಮಾರಿತನ ಬಿಟ್ಟು ಸಾರ್ವಜನಿಕರ ಜೊತೆಯಲ್ಲಿ ಉತ್ತಮ ರೀತಿಯಲ್ಲಿ ವರ್ತಿಸುವುದನ್ನು ಅವರಿಗೆ ಕಲಿಸಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry