ಉತ್ತಮ ಪರಿಸರ, ಪೌಷ್ಟಿಕ ಆಹಾರ ಅತ್ಯಗತ್ಯ

ಶನಿವಾರ, ಜೂಲೈ 20, 2019
28 °C

ಉತ್ತಮ ಪರಿಸರ, ಪೌಷ್ಟಿಕ ಆಹಾರ ಅತ್ಯಗತ್ಯ

Published:
Updated:

ಸೇಡಂ: ಮನುಷ್ಯನಿಗೆ ಉತ್ತಮ ಗಾಳಿ, ನೀರು ಜೊತೆಗೆ ಪೌಷ್ಟಿಕ ಆಹಾರ ಅಗತ್ಯತೆ ಇದೆ ಎಂದು ಹಿರಿಯ ನ್ಯಾಯಾಧೀಶ ಜಿ.ವಿ. ತುರಮರಿ ಅಭಿಪ್ರಾಯಪಟ್ಟರು.ಭಾನುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ನಂತರ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಅರಣ್ಯ ಇಲಾಖೆ ಶಾಖಾಧಿಕಾರಿ ಸುನೀಲ ಚವ್ಹಾಣ ಮಾತನಾಡಿ, ಹೆಚ್ಚುತ್ತಿರುವ ಕೈಗಾರಿಕೆ, ವಾಹನಗಳ ಸಂಖ್ಯೆಯಿಂದ ಮಾಲಿನ್ಯ ಉಂಟಾಗುತ್ತಿದೆ ಎಂದರು.

ಸಿಡಿಪಿಓ ಸಿ.ವಿ. ರಾಮನ್, ತಾಯಿ ಮಗುವನ್ನು ಹೇಗೆ ಬೆಳೆಸುತ್ತಾಳೆಯೊ ಅದೇ ನಿಟ್ಟಿನಲ್ಲಿ ಮರ-ಗಿಡಗಳನ್ನು ಬೆಳೆಸಬೇಕು ಎಂದು ಮನವಿ ಮಾಡಿಕೊಂಡರು.ವಲಯ ಅರಣ್ಯ ಅಧಿಕಾರಿ ಖಾಸಿಮ್ ಅಲಿ, ಪುರಸಭೆ ಉಪಾಧ್ಯಕ್ಷ ಅನಂತಯ್ಯ ಮುಸ್ತಾಜರ ಇದ್ದರು. ಕಾರ್ಯದರ್ಶಿ ರಮೇಶ ಇಂಜಳ್ಳಿಕರ್ ಸ್ವಾಗತಿಸಿದರು. ಅಧ್ಯಕ್ಷ  ಸಾಯಿರೆಡ್ಡಿ ಹೂವಿನಬಾವಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry