ಉತ್ತಮ ರಸ್ತೆ ನಿರ್ಮಿಸಲಿ

7

ಉತ್ತಮ ರಸ್ತೆ ನಿರ್ಮಿಸಲಿ

Published:
Updated:

ಬೆಂಗಳೂರಿನ ಹೃದಯ ಭಾಗದಲ್ಲಿರುವ ಮಾವಳ್ಳಿಯಲ್ಲಿ ಸುಮಾರು 10 ವರ್ಷಗಳಿಂದಲೂ ವಾಸವಾಗಿದ್ದೇವೆ. ಈ ಭಾಗದ ಬಹುತೇಕ ಬಡಾವಣೆಗಳಲ್ಲಿ ಕಚ್ಚಾ ರಸ್ತೆಗಳಿವೆ. ಮಳೆ ಬಂದಾಗ ಸ್ಥಿತಿ ಮತ್ತಷ್ಟು ಗಂಭೀರವಾಗಿರುತ್ತದೆ.ಸುತ್ತಮುತ್ತಲಿನ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಚುನಾವಣೆ ಸಂದರ್ಭದಲ್ಲಿ ಮನೆ ಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಹೋಗಿದ್ದ ಪ್ರತಿನಿಧಿಗಳು ನಂತರ ವಿಷಯವನ್ನೇ ಮರೆತಿದ್ದಾರೆ.ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತಲೂ ಬಹಳ ಚಿಕ್ಕದಾಗಿರುವ ಮಲೇಷ್ಯಾದಲ್ಲಿ ವಿಸ್ತಾರವಾದ ರಸ್ತೆಗಳಿವೆ. ಅಲ್ಲಿನ ಸಂಚಾರ ವ್ಯವಸ್ಥೆ ಉತ್ತಮವಾಗಿದೆ. ಆ ರೀತಿ ಬೆಂಗಳೂರು ನಗರ ಅಭಿವೃದ್ಧಿಗೆ ಮಾದರಿಯಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry