ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆ

ಸೋಮವಾರ, ಮೇ 20, 2019
32 °C

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆ

Published:
Updated:

ಹಳೇಬೀಡು: ಯುವಜನತೆಯ ದುಷ್ಟಭಾವನೆಗಳು ಸಮಾಜದ ಅಶಾಂತಿಗೆ ಕಾರಣ ಎಂದು ಚಿಕ್ಕಮಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜು ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಶ್ತ್ರ ವೇದಿಕೆ ಆಶ್ರಯದಲ್ಲಿ ಈಚೆಗೆ ನಡೆದ `ಅಪರಾಧ ತಡೆಯುವಲ್ಲಿ ಯುವ ಜನತೆ ಪಾತ್ರ~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೌಟುಂಬಿಕ ವಿಘಟನೆ, ಬೆಳೆವ ವಾತಾವರಣ, ಸ್ನೇಹಿತರು, ನೆರೆಹೊರೆ ಸರಿ ಇಲ್ಲದಿದ್ದರೆ ಯುವಶಕ್ತಿ ದಾರಿ ತಪ್ಪುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡರೆ ಸತ್ಪ್ರಜೆಗಳಾಗಬಹುದು ಎಂದರು.ಸ್ಥಳೀಯ ಪಿಎಸ್‌ಐ ಪಿ.ಪಿ.ಸೊಮೇಗೌಡ ಮಾತನಾಡಿ, ಅಪರಾಧ ತಡೆಯಲು ತಾಳ್ಮೆ ಮುಖ್ಯವಾದ ಆಯುಧ. ತಂದೆ ತಾಯಿಗಳು ಉತ್ತಮ ವಾತವರಣದಲ್ಲಿ ಮಕ್ಕಳನ್ನು ಬೆಳೆಸಿದರೆ ಅವರು ದೇಶ ಕಟ್ಟುವ ಪ್ರಜೆಗಳಾಗುತ್ತಾರೆ ಎಂದರು.ಪ್ರಭಾರಿ ಪ್ರಾಚಾರ್ಯ ಎಸ್.ನಾರಾಯಣ್ ಅಧ್ಯಕ್ಷತೆವಹಿಸಿದ್ದರು. ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ದೇವರಯ್ಯ ಮಾತನಾಡಿದರು.ಉಪನ್ಯಾಸಕರಾದ ಕೆ.ಎಸ್.ದಿನೇಶ್, ವಿಜಯ್ ಕುಮಾರ್, ಈಶ್ವರಪ್ಪ, ದೊಡ್ಡೇಗೌಡ, ಪುಷ್ಪಲತಾ, ವನಿತಾ, ಎಚ್.ಎಂ.ಬಸವರಾಜು, ಅಧೀಕ್ಷಕ ಸತ್ಯಮೂರ್ತಿ, ಸಹಾಯಕ ಕಿರಣ್ ಇತರರು ಇದ್ದರು. ರೂಪಾ ನಿರೂಪಿಸಿ, ಶೋಭಾ ವಂದಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry