ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

7

ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

Published:
Updated:

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂಟು ಮಂದಿ ಶಿಕ್ಷಕರನ್ನು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಾಥಮಿಕ ಶಾಲಾ ವಿಭಾಗದಲ್ಲಿ ದೇವನಹಳ್ಳಿಯ ಮಾರಗೊಂಡನಹಳ್ಳಿಯ ಸಹ ಶಿಕ್ಷಕ ಡಿ.ಮಂಜುನಾಥ, ದೊಡ್ಡಬಳ್ಳಾಪುರದ ಸೊಣ್ಣಪ್ಪನಹಳ್ಳಿಯ ಸಹ ಶಿಕ್ಷಕ ಕೆ.ವೆಂಕಟೇಶ್, ಹೊಸಕೋಟೆಯ ಚಿಕ್ಕಕೋಲಿಗ ಗ್ರಾಮದ ಸಹ ಶಿಕ್ಷಕ ಈಶ್ವರಪ್ಪ ಪೂಜಾರಿ ಮತ್ತು ನೆಲಮಂಗಲದ ವಿಶ್ವೇಶ್ವರಪುರದ ಸಹ ಶಿಕ್ಷಕಿ ಎಲ್.ಟಿ.ವೆಂಕಟಮ್ಮ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರೌಢಶಾಲಾ ವಿಭಾಗದಲ್ಲಿ ದೇವನಹಳ್ಳಿಯ ಸಾದಹಳ್ಳಿಯ ಹಿರಿಯ ಶಿಕ್ಷಕ ಹೆಚ್.ಎಸ್.ಶ್ರಿನಿವಾಸ್, ದೊಡ್ಡಬಳ್ಳಾಪುರದ ಕಾಡನೂರು ಕೈಮರದ ಮುಖ್ಯ ಶಿಕ್ಷಕ ಎಂ.ಗೋಪಾಲಕೃಷ್ಣಯ್ಯ, ಹೊಸಕೋಟೆಯ ಹಸಿಗಾಳ ಗ್ರಾಮ ಸಹ ಶಿಕ್ಷಕ ಪುಂಡಲೀಕಪ್ಪ ಕೆ. ದಡ್ಡಿ ಮತ್ತು ನೆಲಮಂಗಲದ ಸೋಲದೇವನಹಳ್ಳಿಯ ದೈಹಿಕ ಶಿಕ್ಷಕ ಎನ್.ಎಲ್.ನಾರಾಯಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry