ಗುರುವಾರ , ಜೂನ್ 17, 2021
29 °C

ಉತ್ತಮ ಶಿಕ್ಷಣ ನೀಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೋವಿನಕೆರೆ: ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ದಾಗ ಭಾರತವು ವಿಶ್ವದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದು ಕೊಲ್ಕತ್ತ ಶಾರದಾ ಮಠದ ಸಹಾಯಕ ಕಾರ್ಯದರ್ಶಿ ಜ್ಞಾನದಾ ಪ್ರಾಣಾ ಮಾತಾಜಿ ಹೇಳಿದರು.ತೋವಿನಕೆರೆ ಸಮೀಪದ ಜುಂಜರಾನ ಹಳ್ಳಿ ನಿವೇದಿತಾ ವಿದ್ಯಾಪೀಠದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಗಳ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.ಸಾಹಿತಿ ಡಾ.ದೊಡ್ಡರಂಗೇಗೌಡ ಗಣಕಯಂತ್ರ ಕೊಠಡಿ ಉದ್ಘಾಟಿಸಿ ಮಾತನಾಡಿ, ಆದರ್ಶ ವ್ಯಕ್ತಿಗಳಿಂದ ಸಮಾಜದ ನೆಮ್ಮದಿ ಸಾಧ್ಯ ಎಂದರು.ಸನ್ಯಾಸಿನಿಯರ ವಸತಿ ಗೃಹವನ್ನು ವಿಠ್ಠಲ್ ರಾವ್,  ಬೋಜನ ಶಾಲೆಯನ್ನು ವೂಡೇ ಪ್ರತಿಷ್ಠಾನದ ಸವಿತಾ ಪಿ.ಕೃಷ್ಣ ಉದ್ಘಾಟಿಸಿದರು. ಭವಾನಿ ಪ್ರಾಣಾ ಮಾತಾಜಿ, ಅತುಲ ಪ್ರಾಣಾ ಮಾತಾಜಿ, ಪರಹಿತ ಪ್ರಾಣಾ ಮಾತಾಜಿ, ಋತಾತ್ಮ ಪ್ರಾಣಾ ಮಾತಾಜಿ, ಶ್ರಿನಿವಾಸಯ್ಯ, ಪ್ರೊ.ಕೆ.ಚಂದ್ರಪ್ಪ ಭಾಗವಹಿಸಿದ್ದರು. ವಿವೇಕಾನಂದರ ಕುರಿತ ಸ್ಪರ್ಧೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಇನ್ಸ್‌ಪೆಕ್ಟರ್ ವರ್ಗಕ್ಕೆ ಬಂದ್ತಿಪಟೂರು: ಬೆಂಗಳೂರು ಉಪ್ಪಾರ ಪೇಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಲೋಕೇಶ್ವರ್ ವರ್ಗಾವಣೆ ವಿರೋಧಿಸಿ ತಿಪಟೂರು ಸ್ಪೋರ್ಟ್ಸ್ ಕ್ಲಬ್ ನೇತೃತ್ವ ದಲ್ಲಿ ಗುರುವಾರ ನಗರದಲ್ಲಿ ಬಂದ್ ನಡೆಯಿತು.ಬಹುತೇಕ ಅಂಗಡಿಗಳು ಮುಚ್ಚಿದ್ದವು. ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಎಂದಿನಂತೆ ತೆರೆದಿದ್ದವು. ಬಸ್ ಮತ್ತು ವಾಹನ ಸಂಚಾರ ಎಂದಿನಂತಿತ್ತು. ಕೆಂಪಾಂಬ ದೇವಾಲಯ ಬಳಿ ಸಮಾವೇಶಗೊಂಡ ಪ್ರತಿಭಟನೆ ಗಾರರು ನಗರದ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣೆಗೆ ನಡೆಸಿದರು.ಸಿಂಗ್ರಿ ವೃತ್ತದಲ್ಲಿ ರಸ್ತೆತಡೆ ಮಾಡಿದರು. ಕ್ಲಬ್ ಅಧ್ಯಕ್ಷ ಟಿ.ಎಸ್.ಶಿವಪ್ರಸಾದ್, ಸಂಘದ ಉಪಾಧ್ಯಕ್ಷ ಜಿ.ಕೆ. ನಂದಕುಮಾರ್ ಮಾತನಾಡಿದರು.ಸ್ಥಳಕ್ಕೆ ಬಂದ ತಹಶೀಲ್ದಾರ್ ವಿಜಯ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕ್ಲಬ್ ಕಾರ್ಯದರ್ಶಿ ಶಿವಶಂಕರ್, ಉಪಾಧ್ಯಕ್ಷ ಜೆಯೇಷಾ, ವೆಂಕಟಲಾಪತಿ (ಅಣ್ಣಿ), ಬಸವರಾಜು, ಕೆ.ಪಿ. ರವಿ, ಪ್ರಕಾಶ್, ಟಿ.ಎಸ್. ಬಸವರಾಜು, ಚನ್ನಬಸಣ್ಣ, ನಗರಸಭೆ ಸದಸ್ಯರಾದ ಎಂ.ನಾಗರಾಜು, ಟಿ.ಎನ್. ಪ್ರಕಾಶ್, ನಿಜಗುಣ, ಬಾಗೆಪಲ್ಲಿ ನಟ ರಾಜು, ಶ್ರೀನಿವಾಸ್, ಜಿ.ಕೆ.ನಟರಾಜ್, ರಾಜಶೇಖರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.