ಉತ್ತಮ ಸಾಹಿತ್ಯಕ್ಕೆ ಶುದ್ಧ ಮನಸ್ಸೇ ಸ್ಫೂರ್ತಿ

7

ಉತ್ತಮ ಸಾಹಿತ್ಯಕ್ಕೆ ಶುದ್ಧ ಮನಸ್ಸೇ ಸ್ಫೂರ್ತಿ

Published:
Updated:

ಚಾಮರಾಜನಗರ: `ಮನಸ್ಸು ಭ್ರಷ್ಟವಾದರೆ ನಾವು ರಚಿಸುವಂತಹ ಸಾಹಿತ್ಯ ಕೂಡ ಭ್ರಷ್ಟವಾಗುತ್ತದೆ. ಹಾಗಾಗಿ, ಮನಸ್ಸು ಶುದ್ಧತೆಯಿಂದ ಕೂಡಿರಬೇಕು. ಆಗ ಮಾತ್ರ ಉತ್ತಮ ಸಾಹಿತ್ಯ ರಚನೆಯಾಗುತ್ತದೆ~ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಹೇಳಿದರು.ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಆರಂಭವಾದ ಯಜಮಾನ್ ಶ್ರೀದೊಡ್ಡಯ್ಯ ದತ್ತಿ ಸಾಹಿತ್ಯ ಸಪ್ತಾಹ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಅವರು `ಕನ್ನಡ ಸಾಹಿತ್ಯ~ ವಿಷಯ ಕುರಿತು ಮಾತನಾಡಿದರು.ವರ್ತಮಾನದ ಬದುಕು ಸೃಜನಶೀಲತೆಯಲ್ಲಿ ಅಡಕವಾಗಿರುವಾಗ ಮಾಹಿತಿ ಎನ್ನುವುದು ಭೂತಕಾಲದ ವಿಷಯವಾಗಿರುತ್ತದೆ ಎಂದ ಅವರು, ಸೃಜನಶೀಲ ಸಾಹಿತ್ಯ ಉತ್ತಮ ಬದುಕನ್ನು ರೂಪಿಸುತ್ತದೆ ಎಂದರು.`ಮನುಷ್ಯನ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡು ಬದುಕುವಂತಹ ಬಂಡವಾಳಶಾಹಿ ಗಳಿಗೆ ಶರಣಾಗಬಾರದು. ಬದುಕಿನ ಎಲ್ಲ ರಂಗದಲ್ಲೂ ಒಳ್ಳೆಯದೇ ಗೆಲ್ಲಬೇಕು ಎಂಬ ಆಶಯ ಹೊಂದಬೇಕು. ಈ ಹಾದಿಯಲ್ಲಿಯೇ ಸಮಾಜದ ಕೆಡಕುಗಳ ವಿರುದ್ಧ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಜೀವನ ಕಷ್ಟಕರವಾಗುತ್ತದೆ ಎಂದು ವಿಶ್ಲೇಷಿಸಿದರು.ಪುಸ್ತಕಗಳಿಗಿಂತಲೂ ಉತ್ತಮ ಸ್ನೇಹಿತರಿಲ್ಲ ಎಂಬುದನ್ನು ಮರೆಯಬಾರದು. ನಮ್ಮಲ್ಲಿನ ಭಾವನೆಗಳ ಸಂಕೀರ್ಣತೆ ಹೆಚ್ಚಾದಾಗ ಮಾತ್ರ ಧ್ವನಿಸುವ ಸಾಹಿತ್ಯದ ಸಾಲುಗಳ ಆಯಾಮವೂ ವೃದ್ಧಿಯಾಗುತ್ತದೆ ಎಂದರ.ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, `ಓದುವ ಅಭಿರುಚಿ ಕಡಿಮೆಯಾದರೆ ನಷ್ಟ ಕಟ್ಟಿಟ್ಟಬುತ್ತಿ. ಹಾಗಾಗಿ, ಉತ್ತಮ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬದುಕಿನ ಎಲ್ಲ ಸಂಕೀರ್ಣತೆಗಳನ್ನು ಅರ್ಥಮಾಡಿಕೊಂಡು ತೋರಿಸುವಂತಹ ಕೃತಿಯು ಅತ್ಯುತ್ತಮವಾಗಿರುತ್ತದೆ. ಓದಿನಲ್ಲೂ ಉತ್ತಮ ರಂಜನೆ ಸಿಗುತ್ತದೆ~ ಎಂದು ಹೇಳಿದರು.

 

ಎಸ್‌ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಉದ್ಘಾ ಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಪಿ. ದೇವರಾಜು, ದಲಿತ ಮುಖಂಡ ವೆಂಕಟರಮಣ ಸ್ವಾಮಿ(ಪಾಪು), ಡಾ.ಕೃಷ್ಣಮೂರ್ತಿ ಚಮರಂ, ಫರತ್ ಉಲ್ಲಾ, ಶಿವಕುಮಾರ್ ಕೆಂಪನಪುರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry