ಸೋಮವಾರ, ನವೆಂಬರ್ 18, 2019
23 °C

ಉತ್ತರಕೊರಿಯಾ ಸಮರಭೀತಿ ತಾರಕಕ್ಕೆ

Published:
Updated:

ವಾಷಿಂಗ್ಟನ್/ಸಿಯೋಲ್(ಪಿಟಿಐ/ಎಎಫ್‌ಪಿ): ತಾನು ಅಣ್ವಸ್ತ್ರ ಹೊತ್ತ ಕ್ಷಿಪಣಿಯನ್ನು ಅಮೆರಿಕದತ್ತ ಹಾರಿ ಬಿಡಲು ಸರ್ಕಾರದಿಂದ ಅನುಮತಿಯನ್ನು ನಿರೀಕ್ಷಿಸುತ್ತಿರುವುದಾಗಿ ಉತ್ತರ ಕೊರಿಯಾ ಸೇನೆಯು ಹೇಳಿದ ಬೆನ್ನಲ್ಲೆ ಅಮೆರಿಕ ಪಶ್ಚಿಮ ಫೆಸಿಫಿಕ್ ಸಾಗರದ ಗುಹಾಂ ದ್ವೀಪದಲ್ಲಿ ತನ್ನ ಖಂಡಾಂತರ ಕ್ಷಿಪಣಿ ನಿರೋಧ ವ್ಯವಸ್ಥೆಯನ್ನು ನಿಯೋಜಿಸಲು ಆರಂಭಿಸಿದೆ.ಈ ಮಧ್ಯೆ ಜಪಾನ ಹಾಗೂ ದಕ್ಷಿಣ ಕೊರಿಯಾಗಳನ್ನು ಗುರಿಯಾಗಿರಿಸಿಕೊಂಡು ಉತ್ತರ ಕೊರಿಯಾವು ತನ್ನ ಪೂರ್ವ ಭಾಗದಲ್ಲಿ ಮಧ್ಯಮ ಕ್ರಮಾಂಕದ ಕ್ಷಿಪಣಿಗಳನ್ನು ನಿಯೋಜಿಸಲಾರಂಭಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)