ಉತ್ತರಖಂಡ ಪ್ರಳಯ: ಬದುಕುಳಿದವರಿಗೆ ಮಾನಸಿಕ ಖಿನ್ನತೆ

ಮಂಗಳವಾರ, ಜೂಲೈ 16, 2019
28 °C

ಉತ್ತರಖಂಡ ಪ್ರಳಯ: ಬದುಕುಳಿದವರಿಗೆ ಮಾನಸಿಕ ಖಿನ್ನತೆ

Published:
Updated:

ಡೆಹ್ರಾಡೂನ್ (ಪಿಟಿಐ/ಐಎಎನ್‌ಎಸ್): ಉತ್ತರಖಂಡದಲ್ಲಿ ಜಲ ಪ್ರಳಯಕ್ಕೆ ತುತ್ತಾಗಿ ಬದುಕುಳಿದವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿರುವ  ವೈದ್ಯಕೀಯ ತಂಡಗಳು ತಿಳಿಸಿವೆ.ಕುಟುಂಬವನ್ನು ಕಳೆದುಕೊಂಡು ಏಕಾಂಗಿಗಳಾಗಿರುವ ನೂರಾರು ಜನರು ಮಾನಸಿಕ ಖಿನ್ನತೆಯಿಂದ ಬಳುತ್ತಿದ್ದಾರೆ ಎಂದು ವೈದ್ಯಕೀಯ ತಂಡಗಳು ತಿಳಿಸಿವೆ. ಇವರಿಗೆ ಸೂಕ್ತ ಮಾನಸಿಕ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆ ನಡೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.ಮನೆ ಮಠ ಮತ್ತು ಕುಟುಂಬ ಸದಸ್ಯರನ್ನು ಕಳೆದುಕೊಂಡವರು ಬದುಕಿನ ಆಸೆಯನ್ನೇ ಕಳೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ಚೇತರಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಸರಿಯಾಗಿ ಆಹಾರವನ್ನು ಸೇವಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.ಖಿನ್ನತೆಗೆ ಒಳಾಗದವರಿಗೆ ನುರಿತ ಮಾನಸಿಕ ತಜ್ಞರಿಂದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry