ಶನಿವಾರ, ಜೂನ್ 19, 2021
27 °C

ಉತ್ತರಪ್ರದೇಶ, ಗೋವಾ: ದಾಖಲೆಯ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ/ಲಖನೌ (ಪಿಟಿಐ): ಕರಾವಳಿ ರಾಜ್ಯ ಗೋವಾ ಮತ್ತು ಬಲಾಢ್ಯ ರಾಜ್ಯ ಉತ್ತರ ಪ್ರದೇಶದಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ರಮವಾಗಿ ಶೇ 81 ಮತ್ತು ಶೇ 62ರಷ್ಟು ದಾಖಲೆಯ ಶಾಂತಿಯುತ ಮತದಾನವಾಗಿದೆ.ಈ ವಿಷಯವನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರು ಮತದಾನ ಮುಗಿದ ಬಳಿಕ ಸಂಜೆ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.ರಾಜಕೀಯವಾಗಿ ಸೂಕ್ಷ್ಮ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಏಳನೇ ಮತ್ತು ಕೊನೆಯ ಹಂತದ ಮತದಾನ ನಡೆದಿದ್ದು, ಎಲ್ಲ ಹಂತ ಸೇರಿ ಒಟ್ಟಾರೆ ದಾಖಲೆಯ ಶೇ 60 ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಈ ಹಿಂದಿನ ಅತಿಹೆಚ್ಚು ಮತದಾನ 1993ರಲ್ಲಿ ಶೇ 57.13 ಆಗಿತ್ತು.ಹಾಗೆಯೇ ಗೋವಾದಲ್ಲಿ ಈ ಹಿಂದೆ ಅತಿಹೆಚ್ಚು ಮತದಾನ 2007ರಲ್ಲಿ ಶೇ 70.51ರಷ್ಟು ನಡೆದಿತ್ತು.

ಮಾರ್ಗೋವಾ ಬಳಿಯ ಮತಗಟ್ಟೆಯೊಂದರ್ಲ್ಲಲಿ ಈ ಬಾರಿ ಶೇ 100ರಷ್ಟು ಮತದಾನ ನಡೆದಿದೆ ಎಂದು ಖೂರೇಷಿ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.