ಶನಿವಾರ, ಮಾರ್ಚ್ 6, 2021
32 °C

ಉತ್ತರಪ್ರದೇಶ: ಮತ್ತೊಬ್ಬ ಬಿಎಸ್ಪಿ ಶಾಸಕನ ಉಚ್ಚಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶ: ಮತ್ತೊಬ್ಬ ಬಿಎಸ್ಪಿ ಶಾಸಕನ ಉಚ್ಚಾಟನೆ

ಲಖನೌ (ಪಿಟಿಐ): ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ತಿಲ್‌ಹಾರ್‌ ಶಾಸಕ ರೋಶನ್‌ ಲಾಲ್‌ ವರ್ಮ ಅವರನ್ನು ಉಚ್ಚಾಟಿಸಿದೆ.2017ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಬಿಎಸ್ಪಿಯಲ್ಲಿ ಅಸಮಾಧಾನ ಹೆಚ್ಚುತ್ತಿರುವುದರ ನಡುವೆ  ಈ ಬೆಳವಣಿಗೆ ನಡೆದಿದೆ.ವರ್ಮ ಅವರು ತಮ್ಮ ಕ್ಷೇತ್ರದಿಂದ ದೀರ್ಘ ಕಾಲ ದೂರ ಉಳಿದಿದ್ದರು. ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದರು. ಅವರು ಮತ್ತು ಅವರ ಮಗ ಪಕ್ಷಕ್ಕೆ ಕೆಟ್ಟ ಹೆಸರು ತರುವ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಬರೇಲಿಯ ಬಿಎಸ್ಪಿ ಸಂಚಾಲಕ ಬ್ರಹ್ಮ ಸ್ವರೂಪ್‌ ಸಾಗರ್‌ ತಿಳಿಸಿದ್ದಾರೆ.ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ವರ್ಮ ಅವರಿಗೆ ಮೂರು ತಿಂಗಳ ಹಿಂದೆ ಎಚ್ಚರಿಕೆ ನೀಡಲಾಗಿತ್ತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂದೂ ತಿಳಿಸಲಾಗಿತ್ತು. ಆದರೆ, ಅವರ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿಲ್ಲ. ಪಕ್ಷದ ಹೈಕಮಾಂಡ್‌ ಸೂಚನೆಯಂತೆ ಅವರನ್ನು ವಜಾಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.ಟಿಕೆಟ್‌ ನೀಡಲು ಹಣ ಕೇಳಲಾಗುತ್ತಿದೆ ಎಂದು ಈಚೆಗೆ ಪಕ್ಷ ತೊರೆದಿದ್ದ ಹಿರಿಯ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಟೀಕಿಸಿದ್ದರು. ಆ ಬಳಿಕ ಬಿಎಸ್ಪಿಯಲ್ಲಿ ನಾಯಕರು ಮತ್ತು ಶಾಸಕರ ಬಂಡಾಯ ಮುಂದುವರಿದಿದೆ.ಪಕ್ಷದ ನಾಯಕಿ ಮಾಯಾವತಿ ಅವರು ವಿಧಾನಸಭೆ ಟಿಕೆಟ್‌ಗೆ ಸಂಬಂಧಿಸಿ ಹಣ ಕೇಳುತ್ತಿದ್ದಾರೆ ಎಂದು ಶಾಸಕರಾದ ರೋಮಿ ಸಹಾನಿ ಮತ್ತು ಬೃಜೇಶ್‌ ವರ್ಮ ಅವರು ಆರೋಪಿಸಿದ್ದರು.  ಅವರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.